ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರ ಸೆರೆ
ಶಿರ್ವ: ಶಿರ್ವ ಪೋಲಿಸ್ ಠಾಣಾ ವ್ಯಾಪ್ತಿಯ ಬೆಳಪು ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಶಿರ್ವ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬೆಳಪು ಇಂಡಸ್ಟ್ರಿಯಲ್ ಏರಿಯ ಕ್ರಾಸ್ ಭಾಗದಲ್ಲಿ ಗಾಂಜಾ ಮಾರಾಟ ಮಾಡುವ ಬಗ್ಗೆ ಮಾಹಿತಿ ದೊರೆತ ತಕ್ಷಣ ಶಿರ್ವ ಪೊಲೀಸ್ ಠಾಣಾಧಿಕಾರಿ ಮಂಜುನಾಥ ಮರಬದ ಇವರು ಠಾಣಾ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಗಾಂಜಾ ಮಾರಾಟ ಮಾಡಲು ಬಂದಿದ್ದ ಆಪಾದಿತರಾದ ಕೊಡವೂರು ಗ್ರಾಮದ ಲಕ್ಷ್ಮೀ ನಗರದ ಅಭಿಷೇಕ್ ಪಾಲನ್ (30) ಮತ್ತು ಉಪ್ಪೂರು ಗ್ರಾಮದ ಕೊಳಲಗಿರಿ ನಿವಾಸಿ ಆರ್ ಶಾಶ್ವತ್ (24) ಇವರನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿತರು ತೋರಿಸಿ ಹಾಜರು ಪಡೆಸಿದ ಸುಮಾರು 115.44 ಗ್ರಾಮ್ ಗಾಂಜ (ಅಂದಾಜು ಮೌಲ್ಯ ರೂ 5000) ತೂಕದ ಡಿಜಿಟಲ್ ಯಂತ್ರ (ಅಂದಾಜು ಮೌಲ್ಯ 200 ರೂ), ಎಲೆಯ ಚಿತ್ರ ಇರುವ ಪ್ಲಸ್ಟಿಕ್ ಡಬ್ಬ-1 ಮತ್ತು ಕೆಂಪು ಬಣ್ಣದ ಜಿಪ್ ಇರುವ ಕೈಚೀಲ 1, ಕೃತ್ಯದ ಸ್ಥಳದಲ್ಲಿದ್ದ ಯಮಾಹ ಮೋಟರ್ ಬೈಕ್ (ಅಂದಾಜು ಮೌಲ್ಯ ರೂ. 70,000) ಸ್ವಾಧೀನ ಪಡಿಸಿಕೊಂಡಿದ್ದಾರೆ.
ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.