ಜಿಲ್ಲಾ ಮಟ್ಟದ ಪಿ.ಯು.ಕಬಡ್ಡಿ ಪಂದ್ಯಾಟ: ಫಲಿತಾಂಶ
ಸುಳ್ಯ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ಸಹಯೋಗದಲ್ಲಿ ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗ ಶ್ರೀ ಶಾರದಾoಬ ವೇದಿಕೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪಪೂ ವಿಭಾಗದ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಹುಡುಗರ ವಿಭಾಗದಲ್ಲಿ ಬೆಳ್ತಂಗಡಿಯ ಎಸ್‌ಡಿಎಂ ಉಜಿರೆ (ಪ್ರ) ಮಂಗಳೂರು ಮಿಲಾಗ್ರಿಸ್ ಕಾಲೇಜು (ದ್ವಿ), ಹಾಗೂ ಹುಡುಗಿಯರ ವಿಭಾಗದಲ್ಲಿ ಮೂಡಬಿದಿರೆ ಆಳ್ವಾಸ್ ಕಾಲೇಜು (ಪ್ರ) ಮಂಗಳೂರು ಕೆನರಾ ಕಾಲೇಜು (ದ್ವಿ)ಸ್ಥಾನ ಪಡೆದುಕೊಂಡವು. ಸರ್ವಾಂಗೀಣ ಆಟಗಾರರಾಗಿ ಮುಸ್ತಾಫ,(ಮಿಲಾಗ್ರಿಸ್), ಹಂಶಿಕ, (ಆಳ್ವಾಸ್), ಮತ್ತು ಉತ್ತಮ ದಾಳಿಗಾರರಾಗಿ ಕಾರ್ತಿಕ್ (ಎಸ್‌ಡಿಎಂ), ಆತ್ಮಿಕಾ ವಿ ಶೆಟ್ಟಿ (ಕೆನರಾ) ಉತ್ತಮ ಹಿಡಿತಗಾರರಾಗಿ ಸತ್ಯ, (ಎಸ್‌ಡಿಎಂ), ಚೈತಿಕ (ಆಳ್ವಾಸ್) ವೈಯಕ್ತಿಕ ಬಹುಮಾನ ಪಡೆದುಕೊಂಡರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಒಎಲ್‌ಇ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆಸಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಶಾರದಾಂಬ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು, ಎನ್ನೆಂಸಿಯ ಪ್ರಾಚಾರ್ಯರಾದ ಡಾ. ರುದ್ರ ಕುಮಾರ್ ಎಂ.ಎಂ., ಕ್ರೀಡಾ ವೀಕ್ಷಕರಾದ ಶಶಿಧರ ಮಾಣಿ, ಜಿಲ್ಲಾ ಕ್ರೀಡಾ ಸಂಯೋಜಕರು ಪ್ರೇಮನಾಥ್ ಶೆಟ್ಟಿ, ಎನ್ನೆಂಪಿಯುಸಿ ಪ್ರಾಚಾರ್ಯರಾದ ಮಿಥಾಲಿ ಪಿ. ರೈ, ಉಪಸ್ಥಿರಿದ್ದು ಬಹುಮಾನ ವಿತರಿಸಿದರು.
ಸುಳ್ಯ ಎನ್ನೆಂಪಿಯುಸಿಯ ಕಬಡ್ಡಿ ಕೋಚ್ ನಾಗರಾಜ್ ನಾಯ್ಕ್ ಭಟ್ಕಳ ಸಹಕರಿಸಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಬೇಬಿ ವಿದ್ಯಾ ಪಿಬಿ ಸ್ವಾಗತಿಸಿ, ನಿರೂಪಿಸಿದರು, ವೀಕ್ಷಕ ವಿವರಣೆಯನ್ನು ಹಾಗೂ ವಿಜೇತರ ಪಟ್ಟಿಯನ್ನು ಮೆಡಿಕಲ್ ಕಾಲೇಜು ಉದ್ಯೋಗಿ ತೀರ್ತೆಶ್ ಯಾದವ್ ನಡೆಸಿಕೊಟ್ಟರು. ವಿಜಯ್ ಅತ್ತಾಜೆ ವೀಕ್ಷಕ ವಿವರಣೆ ನೀಡಿದರು.ಸುಳ್ಯ ಎನ್ನೆಂಪಿಯುಸಿ ಉಪನ್ಯಾಸಕಿ ಸುಚೇತ ಎಂ ವಂದಿಸಿದರು.