ಧರ್ಮಸ್ಥಳ ಪ್ರಕರಣ-ಎಸ್‌ಐಟಿ ತನಿಖೆ ಚುರುಕು: ಖಾಸಗಿ ಕ್ಲಿನಿಕ್‌ನಿಂದ ಮಾಹಿತಿ ಸಂಗ್ರಹ
ಉಜಿರೆ: ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನೂರಾರು ಮೃತದೇಹಗಳನ್ನು ಹೂಳಲಾಗಿದೆ ಎಂಬ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು ಉಜಿರೆಯ ಖಾಸಗಿ ಕ್ಲಿನಿಕ್‌ಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ.
ಬೆಳ್ತಂಗಡಿ ತಾಲೂಕಿನ ಉಜಿರೆ ಬಸ್ ನಿಲ್ದಾಣದ ಪಕ್ಕದ ಎಸ್.ಕೆ.ಮೆಮೋರಿಯಲ್ ಹಾಲ್ ನಲ್ಲಿರುವ ಖಾಸಗಿ ದಂತ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ್ದ ಎಸ್.ಐ.ಟಿ ಮತ್ತು ಎಫ್‌ಎಸ್‌ಎಲ್ ಸೋಕೋ ತಂಡದ ಅಧಿಕಾರಿಗಳು ಇಂದು ಮಧ್ಯಾಹ್ನ ಭೇಟಿ ನೀಡಿದ್ದರು. ಕ್ಲಿನಿಕ್ ನಲ್ಲಿ ಪರಿಶೀಲನೆ ನಡೆಸಿ ಅಲ್ಲಿನ ವೈದ್ಯ ಡಾ.ದಯಾಕರ್ ಅವರಿಂದ ಮಾಹಿತಿ ಸಂಗ್ರಹಿಸಿದ್ದಾರೆ.
ಧರ್ಮಸ್ಥಳ ನೇತ್ರಾವತಿ ನದಿ ಸಮೀಪದ ಬಂಗ್ಲೆ ಗುಡ್ಡದಲ್ಲಿ ಪತ್ತೆಯಾಗಿರುವ ಮಾನವ ಅವಶೇಷಗಳ ಮೂಲವನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಈ ಕ್ಲಿನಿಕ್ ನಲ್ಲಿ ಮಾಹಿತಿ ಸಂಗ್ರಹಿಸಲಾಗಿದೆ ಎನ್ನಲಾಗಿದೆ.
ಮೃತದೇಹ ಸಿಕ್ಕ ದಿನವೇ ದಹನ..
ಎಸ್‌ಐಟಿ ಕಚೇರಿಗೆ ಹೋರಾಟಗಾರರಾದ ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ, ಸೌಜನ್ಯ ತಾಯಿ ಕುಸುಮಾವತಿ ಸೇರಿದಂತೆ 12 ಮಂದಿ ಇಂದು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಟಿದ ಮಟ್ಟಣ್ಣವರ್, ಧರ್ಮಸ್ಥಳದಲ್ಲಿ ನಾಲ್ಕೈದು ದಶಕಗಳಿಂದ ಅಸಹಜ ಸಾವುಗಳು ಆಗುತ್ತಿದ್ದರೂ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ತನಿಖಾ ಸಂಸ್ಥೆಗಳು ಯಶಸ್ವಿಯಾಗಿಲ್ಲ. ಯಾವ ಪ್ರಕರಣಕ್ಕೂ ತಾರ್ಕಿಕ ಅಂತ್ಯ ದೊರೆತಿಲ್ಲ. ವೇದವಲ್ಲಿ, ಪದ್ಮಲತಾ, ಸೌಜನ್ಯ ಕುಟುಂಬಸ್ಥರು ದೂರು ನೀಡಿದ್ದಾರೆ. ಈ ಪ್ರಕರಣಗಳ ಎಫ್‌ಐಆರ್ ಆಗಬೇಕು, ಇಲ್ಲಿ ಎಫ್‌ಐಆರ್ ಇಲ್ಲದ ಸಾಕಷ್ಟು ಪ್ರಕರಣಗಳು ನಡೆದಿದೆ. ಮೃತದೇಹ ಸಿಕ್ಕಿದ ದಿನವೇ ಆ ಮೃತದೇಹವನ್ನು ದಹನ ಮಾಡಿದ್ದಾರೆ. ಪಂಚಾಯತ್ ಈ ದಾಖಲೆಗಳನ್ನು ನೀಡಿದೆ ದಾಖಲೆಗಳ ಆಧಾರದಲ್ಲಿ ದೂರು ನೀಡಿ ಎಫ್‌ಐಆರ್ ದಾಖಲಿಗೆ ನವಿ ಮಾಡಿದ್ದೇವೆ.
ನಮ್ಮ ಆರೋಪಗಳು ಸುಳ್ಳಾದರೆ ತನಿಖೆಯನ್ನು ಎದುರಿಸುತ್ತೇವೆ. ಎಸ್ ಐ ಟಿ ಅಧಿಕಾರಿಗಳು ನಮಗೆ ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ ಚಿನ್ನಯ್ಯ ಮೃತದೇಹ ಹೂತಿರುವುದಾಗಿ ನ್ಯಾಯಾಲಯಕ್ಕೆ ಹೇಳಿಕೆ ನೀಡಿ ಈಗ ಉಲ್ಟಾ ಹೊಡೆದಿದ್ದಾನೆ. ಚಿನ್ನಯ್ಯನ ಹಿಂದೆ ಯಾರಿದ್ದಾರೆ ಎಂಬ ಕುರಿತು ತನಿಖೆಯಾಗಬೇಕಿದೆ.
ಮಹೇಶ್ ಶೆಟ್ಟಿ ತಿಮರೋಡಿಯ ಮನೆಯ ಗೋದಾಮಿನಲ್ಲಿದ್ದ ಐದಾರು ವರ್ಷದಿಂದ ಬಳಸದೆ ಇದ್ದ ಏರ್ ಗನ್‌ನ್ನು ಎಕೆ 47 ತರ ವೈಭವಿಸಿದ್ದಾರೆ ಕೃಷಿಕರು ಬಳಸುವ ಏರ್ ಗನ್ ಗೋದಾಮಿನಲ್ಲಿತ್ತು ಎಂದರು.