ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ‘ಗೆಳತಿ’ ಆಪ್ತಸಲಹಾ ಸಮಿತಿ: ಹೇಮಾವತಿ ವೀ. ಹೆಗ್ಗಡೆ

ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ‘ಗೆಳತಿ’ ಆಪ್ತಸಲಹಾ ಸಮಿತಿ: ಹೇಮಾವತಿ ವೀ. ಹೆಗ್ಗಡೆ


ಉಜಿರೆ: ಮಹಿಳೆಯರ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸಲು ರಚಿಸಲಾಗಿರುವ “ಗೆಳತಿ” ಆಪ್ತಸಲಹಾ ಸಮಿತಿಗಳನ್ನು ಸದ್ಯದಲ್ಲಿಯೇ ಜಿಲ್ಲಾಮಟ್ಟ ಹಾಗೂ ತಾಲ್ಲೂಕು ಮಟ್ಟಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆಯವರು ಹೇಳಿದರು.

ಅವರು ಗುರುವಾರ ಧರ್ಮಸ್ಥಳದಲ್ಲಿ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಯೋಜನಾಧಿಕಾರಿಗಳು ಮತ್ತು ಜಿಲ್ಲಾಸಮನ್ವಯಾಧಿಕಾರಿಗಳ “ಗೆಳತಿ” ಕಾರ್ಯಕ್ರಮದ ಆಪ್ತಸಮಾಲೋಚನಾ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಪ್ರಸ್ತುತ ರಾಜ್ಯದಲ್ಲಿ ಏಳು ಪ್ರಾದೇಶಿಕ ವ್ಯಾಪ್ತಿಯಲ್ಲಿ “ಗೆಳತಿ” ಆಪ್ತಸಮಾಲೋಚನಾ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ. ಈ ಸಮಿತಿಯಲ್ಲಿ ವಕೀಲರು, ಸ್ತ್ರೀರೋಗ ತಜ್ಞರು, ಮನೋವಿಜ್ಞಾನಿಗಳು, ಪೊಲೀಸ್ ಅಧಿಕಾರಿಗಳು ಇದ್ದು ಆಪ್ತಸಮಾಲೋಚನೆ ಮೂಲಕ ಸೌಹಾರ್ದಯುತವಾಗಿ ಮಹಿಳೆಯರ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ ಎಂದು ಅವರು ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿಲ್ಕುಮಾರ್ ಮತ್ತು ಹಣಕಾಸು ಅಧಿಕಾರಿ ಶಾಂತಾರಾಮ ಪೈ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article