ಉಜಿರೆ ಎಸ್‌ಡಿಎಂ ಕಾಲೇಜು: ‘ಮಾನಸಿಕ ಆರೋಗ್ಯ’ ಕುರಿತ ಪೋಸ್ಟರ್ ಪ್ರದರ್ಶನಕ್ಕೆ ಚಾಲನೆ
ಕಾಲೇಜಿನ ಕಲಾ ನಿಕಾಯದ ಡೀನ್, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾನಸಿಕ ಆರೋಗ್ಯ ಬಹಳ ಮುಖ್ಯವಾಗಿದ್ದು, ನೆಮ್ಮದಿಯ ಮೊರೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಮನಃಶಾಸ್ತ್ರ ವಿಭಾಗ ಮಹತ್ತರ ಜವಾಬ್ದಾರಿ ಹೊಂದಿದೆ ಎಂದು ಹೇಳಿದರು.
ಮಾನಸಿಕ ಆರೋಗ್ಯ ಕುರಿತ ಅರಿವು, ಕಾಳಜಿ ಪಸರಿಸುವಲ್ಲಿ ಮನಃಶಾಸ್ತ್ರ ವಿಭಾಗಕ್ಕೆ ಹೆಚ್ಚು ಅವಕಾಶಗಳಿವೆ. ಮನಃಶಾಸ್ತ್ರ ವಿದ್ಯಾರ್ಥಿಗಳು ಜಾಗೃತಿ ಮೂಡಿಸಬೇಕು. ಜಾಗೃತಿ ಪೋಸ್ಟರ್‌ಗಳು ಗೋಡೆಗೆ ಸೀಮಿತವಾಗದೆ ಎಲ್ಲರಿಗೂ ತಲುಪುವಂತಾಗಬೇಕು. ಇನ್ನಷ್ಟು ಜಾಗೃತಿ ಕಾರ್ಯಕ್ರಮಗಳು ವಿಭಾಗದಿಂದ ಮೂಡಿಬರಲಿ ಎಂದು ಅವರು ಆಶಿಸಿದರು.
ವಿಜ್ಞಾನ ನಿಕಾಯದ ಡೀನ್, ಸಂಖ್ಯಾಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಸವಿತಾ ಕುಮಾರಿ, ಮನಃಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ವಂದನಾ ಜೈನ್, ಉಪನ್ಯಾಸಕರಾದ ಡಾ. ಸುಧೀರ್ ಕೆ.ವಿ., ಪದ್ಮಶ್ರೀ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕನ್ನಿಕಾ ಎಸ್. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೀರ್ತನಾ ವಂದಿಸಿದರು.