.jpeg)
ಮಾದಕ ವಸ್ತು ಸೇವನೆ: ಮೂವರ ಬಂಧನ
Monday, October 20, 2025
ಉಳ್ಳಾಲ: ಮಾದಕ ವಸ್ತುಗಳನ್ನು ಸೇವಿಸಿ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿದ್ದ ಮೂವರನ್ನು ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಬಂಧಿಸಿದ ಘಟನೆ ಮುನ್ನೂರು ಗ್ರಾಮದ ಕುತ್ತಾರು ಪಂಡಿತ್ ಹೌಸ್ ಬಳಿ ನಡೆದಿದೆ.
ಸಾಹುಲ್ ಹಮೀದ್ ರಾಯೀಜ್, ಮಹಮ್ಮದ್ ಆಸೀಫ್, ಅಬ್ದುಲ್ ಮಜೀದ್ ಬಂಧಿತರು.
ಇವರನ್ನು ಬಂಧಿಸಿದ ಮಂಗಳೂರು ಸಿಸಿಬಿ ಘಟಕದ ಪಿಎಸ್‌ಐ ನೇತೃತ್ವದ ಸಿಬ್ಬಂದಿ ನಗರದ ಕುಂಟಿಕಾನ ಎ.ಜೆ.ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆರೋಪಿಗಳು ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.