ಪುಟ್‌ಪಾತ್ ಅತಿಕ್ರಮಿಸಿದ ಅನಧಿಕೃತ ಗೂಡಂಗಡಿಗಳ ತೆರವು
ಗ್ರಾ.ಪಂ. ಅಧ್ಯಕ್ಷ ರಮ್ಲಾನ್ ಮಾರಿಪಲ್ಲ ಹಾಗೂ ಪಿ.ಡಿ.ಒ ಡಾ. ಸ್ಮೃತಿ ಯು. ಅವರ ನೇತೃತ್ವದಲ್ಲಿ ಪೊಲೀಸರ ಸಹಕಾರದಲ್ಲಿ ತೆರವು ಕಾರ್ಯಾಚರಣೆ ನಡೆಸಿ ಸಾರ್ವಜನಿಕರಿಗೆ ನಡೆದಾಡಲು ಅನುಕೂಲ ಮಾಡಿಕೊಡಲಾಯಿತು.
ಪುಟ್‌ಪಾತ್ ಮತ್ತು ಚರಂಡಿ ಬದಿವರೆಗೂ ಅತಿಕ್ರಮಿಸಿ ನಡೆದಾಡಲು ಅನಾನುಕೂಲವಾಗುವ ರೀತಿಯಲ್ಲಿ ಅನಧಿಕೃತವಾಗಿ ಅಂಗಡಿಗಳನ್ನಿರಿಸಿ ವ್ಯಾಪಾರ ಮಾಡಲಾಗುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟವರಿಗೆ ಹಲವು ಬಾರಿ ಪಂಚಾಯತ್ ವತಿಯಿಂದ ಎಚ್ಚರಿಕೆ ನೀಡಲಾಗಿದ್ದರೂ ತೆರವಾಗೊಳಿಸದ ಹಿನ್ನಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಪಂಚಾಯತ್‌ನ ಈ ದಿಟ್ಟ ಕ್ರಮಕ್ಕೆ ಸಾರ್ವಜನಿಕರಿಂದಲು ಶ್ಲಾಘನೆ ವ್ಯಕ್ತವಾಯಿತು.
ರಾಷ್ಟ್ರೀಯ ಹೆದ್ದಾರಿ ಪಕ್ಕ, ಬಸ್ ತಂಗುದಾಣ ಬಳಿ ಅಡ್ಡಾದಿಡ್ಡಿ ವಾಹನ ನಿಲುಗಡೆಗೊಳಿಸುವುದರ ವಿರುದ್ಧವು ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಗ್ರಾ.ಪಂ. ಅಧ್ಯಕ್ಷ ರಮ್ಲಾನ್ ತಿಳಿಸಿದ್ದಾರೆ.
ಫುಟ್‌ಪಾತ್‌ಗೆ ಇಂಟರ್ ಲಾಕ್:
ಪಾದಚಾರಿಗಳಿಗೆ ನಡೆದಾಡುವ ನಿಟ್ಟಿನಲ್ಲಿ ಇಂಟರ್ಲಾಕ್ ಅಳವಡಿಸುವ ಯೋಜನೆ ಇದ್ದು, ಈ ಬಗ್ಗೆ ಸ್ಥಳೀಯ ಶಾಸಕರು, ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಇಂಟರ್ಲಾಕ್ ಅಳವಡಿಸಿ ಸ್ವಚ್ಚ ಮತ್ತು ಸುಂದರ ಫರಂಗಿಪೇಟೆಗೆ ಆದ್ಯತೆ ನೀಡಲಾಗುವುದು ಎಂದು ಪುದು ಗ್ರಾ.ಪಂ. ಅಧ್ಯಕ್ಷ ರಮ್ಲಾನ್ ಮಾರಿಪಲ್ಲ ತಿಳಿಸಿದ್ದಾರೆ.