ಕಟೀಲು 7 ಮೇಳಗಳ ದೇವರ ಅದ್ಧೂರಿಯ ಮೆರವಣಿಗೆ: ಸಹಸ್ರಾರು ಮಂದಿ ಭಾಗಿ: ಸುಖ ನೆಮ್ಮದಿಯ ಆಧ್ಯಾತ್ಮಕ್ಕೆ ಯಕ್ಷಗಾನ ಪೂರಕ

ಕಟೀಲು 7 ಮೇಳಗಳ ದೇವರ ಅದ್ಧೂರಿಯ ಮೆರವಣಿಗೆ: ಸಹಸ್ರಾರು ಮಂದಿ ಭಾಗಿ: ಸುಖ ನೆಮ್ಮದಿಯ ಆಧ್ಯಾತ್ಮಕ್ಕೆ ಯಕ್ಷಗಾನ ಪೂರಕ


ಕಟೀಲು: ಯಕ್ಷಗಾನದ ಪರಿಣಾಮ ಇಲ್ಲಿ ನೆಮ್ಮದಿಯ ಸಮಾಜವನ್ನು ಸಾಂಸ್ಕೃತಿಕ ಪುನರುತ್ಥಾನದ ಮೂಲಕ ಕಟ್ಟಲು ಯಕ್ಷಗಾನದ ಕೊಡುಗೆ ದೊಡ್ಡದಿದೆ. ಕಟೀಲಿನ ಏಳು ಮೇಳಗಳು, ಇಷ್ಟು ದೊಡ್ಡ ಸಂಖ್ಯೆಯ ಕಲಾವಿದರು, ಸೇವೆಯಾಟ ಆಡಿಸುವ ಭಕ್ತರ ಭಯ ಭಕ್ತಿ ಇವೆಲ್ಲದರ ಅಗಾಧತೆಯನ್ನು ಕೇಳಿದ್ದೇನೆ. ಓದಿ ತಿಳಿದಿದ್ದೇನೆ. ಹಾಗಾಗಿಯೇ ಮತ್ತೆ ಕಟೀಲು ಕ್ಷೇತ್ರಕ್ಕೆ ಬಂದಿದ್ದೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಅವರು ಬಜಪೆಯಿಂದ ಕಟೀಲು ಕ್ಷೇತ್ರಕ್ಕೆ ಕಟೀಲು ಏಳೂ ಯಕ್ಷಗಾನ ಮೇಳಗಳ ದೇವರು  ಹಾಗೂ ಪರಿಕರಗಳ ಅದ್ದೂರಿಯ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ಮನುಷ್ಯನ ಆಸೆಗೆ ಮಿತಿಯಿಲ್ಲ. ಪಂಚಾಯತಿನಲ್ಲಿ ಗೆದ್ದವನಿಗೆ ಶಾಸಕನಾಗುವ ಆಸೆ. ಆದಮೇಲೆ ಸಚಿವನಾಗುವಾಸೆ, ಆಮೇಲೆ ಮುಖ್ಯಮಂತ್ರಿಯಾಗುವಾಸೆ. ಸಾವಿರ ದುಡಿಯುವವನಿಗೆ ಲಕ್ಷದ ಆಸೆ. ಲಕ್ಷ ಬಂದರೆ ಕೋಟಿಯ ಆಸೆ. ಅಂತಿಮವಾಗಿ ಸುಖ ನೆಮ್ಮದಿ ಇರುವುದು ಕಣ್ಣು ಮುಚ್ಚಿದಾಗ ಬರುವ ನಿದ್ರೆಯಲ್ಲಿ. ಹಸಿವಾದಾಗ ಮಾಡಿದ ಊಟದಲ್ಲಿ ಮತ್ತು ಆಧ್ಯಾತ್ಮದಲ್ಲಿ. ದೇವರಲ್ಲಿ ಭಕ್ತಿ ಮತ್ತು ಭಯದ ಪರಂಪರೆಯನ್ನು ನಮ್ಮಲ್ಲಿ ತಾಯಂದಿರು ಹುಟ್ಟಿಸಿದ್ದಾರೆ. ಕರಾವಳಿಯಲ್ಲಿ ದೇವರೆಡೆಗೆ ಭಯ ಭಕ್ತಿಯನ್ನು ಆಧ್ಯಾತ್ಮದ ಸೆಳೆತವನ್ನು ಯಕ್ಷಗಾನ ಮೂಡಿಸಿದೆ ಎಂದರು.

ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಮಾಣಿಲ ಮೋಹನದಾಸ ಸ್ವಾಮೀಜಿ, ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ದೇವಳದ  ಆಡಳಿತ ಮಂಡಳಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಶಾಸಕ ಉಮಾನಾಥ ಕೋಟ್ಯಾನ್, ಭೋಜೇಗೌಡ, ಮಾಜಿ ಸಾಂಸದ ನಳಿನ್ ಕುಮಾರ್ ಕಟೀಲು, ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ಶ್ಯಾಮ್ ಭಟ್, ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್, ಅಭಯಚಂದ್ರ ಜೈನ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಯಕ್ಷಧರ್ಮಭೋದಿನಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ರಾಘವೇಂದ್ರ ಆಚಾರ್, ಕಟೀಲು ದೇಗುಲದ ಅರ್ಚಕರಾದ ಲಕ್ಷೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಮಿಥುನ್ ರೈ ಮತ್ತಿತರರು ಉಪಸ್ಥಿತರಿದ್ದರು.

ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ ಸ್ವಾಗತಿಸಿ, ನಿತೇಶ್ ಎಕ್ಕಾರು ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article