ನಂತೂರು ಬಳಿ ಹೊತ್ತಿ ಉರಿದ ಕಾರು
Friday, November 14, 2025
ಮಂಗಳೂರು: ನಗರದ ನಂತೂರು ಬಳಿ ಕಾರೊಂದು ಹೊತ್ತಿ ಉರಿದ ಘಟನೆ ಸಂಭವಿಸಿದೆ. ಬಿಳಿ ಬಣ್ಣದ ಹುಂಡೈ ವೆರ್ನ ಕಾರಿನಲ್ಲಿ ದಾರಿ ಮಧ್ಯೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ನಡೆದಿದೆ.
ಪಾಲಿಕೆ ನೀರು ಸರಬರಾಜು ಟ್ಯಾಂಕರ್ ಸ್ಥಳಕ್ಕೆ ಆಗಮಿಸಿದ್ದು, ಟ್ಯಾಂಕರ್ ಸಿಬ್ಬಂದಿ ನೀರು ಹಾಯಿಸುವ ಮೂಲಕ ಕಾರಿನಲ್ಲಿ ಉಂಟಾದ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಘಟನೆಗೆ ಕಾರಣ ಇನ್ನಷ್ಟೆ ತಿಳಿದು ಬರಬೇಕಿದೆ. ಸ್ಥಳದಲ್ಲಿ ಸಂಚಾರಿ ಪೊಲೀಸರು ಉಪಸ್ಥಿತರಿದ್ದಾರು.