ಗ್ರಾಮೀಣ ಕ್ರೀಡೆಗಳು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ: ಶಾಸಕ ವೇದವ್ಯಾಸ ಕಾಮತ್
ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಜ್ವಲ್ ಯುವಕ ಮಂಡಲ (ರಿ) ಸೂಟರ್‌ಪೇಟೆ ಇದರ ಆಶ್ರಯದಲ್ಲಿ ನಗರದ ಎಕ್ಕೂರು ಕೃಷಿ ವಿಜ್ಞಾನ ಕೇಂದ್ರ ಫಿಶರೀಸ್ ಕಾಲೇಜು ಆವರಣದ ಗದ್ದೆಯಲ್ಲಿ ಏರ್ಪಡಿಸಲಾದ ‘ಬಲೇ ಗೊಬ್ಬುಗ ಕೆಸರಡೊಂಜಿ ದಿನ’ ಎನ್ನುವ ಗ್ರಾಮೀಣ ಕೆಸರು ಗದ್ದೆ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಮಾತನಾಡಿ, ಗ್ರಾಮೀಣ ಕ್ರೀಡೆಗಳು ಸಾಂಪ್ರದಾಯಿಕ ಸಂಪರ್ಕ ಸಾಧಿಸುವ ಒಂದು ಕೊಂಡಿಯಾಗಿದ್ದು, ಇದು ಯುವ ಸಂಘಟನೆಗೆ ಪೂರಕವಾಗಿದೆ ಎಂದರು.
ಸಮಾರಂಭದಲ್ಲಿ ಅಸ್ತ್ರ ಗ್ರೂಪ್ ಸಿಇಓ ಲಂಚು ಲಾಲ್ ಕೆ.ಎಸ್., ಅಗರಿ ಎಂಟರ್ಪ್ರೈಸಸ್ ಮಾಲಕರಾದ ರಾಘವೇಂದ್ರ ಅಗರಿ, ಮಾಜಿ ಕಾರ್ಪೊರೇಟರ್ ಭರತ್ ಕುಮಾರ್, ನಿತಿ ಎಜುಕೇಶನ್ ಟ್ರಸ್ಟ್ ಗುರುವಾಯನಕೆರೆ ಇದರ ಅಧ್ಯಕ್ಷ ಸಜಿ ಪಿ.ಆರ್., ನಾಗುರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆನಂದ ಶೆಟ್ಟಿ ಅಡ್ಯಾರ್, ಉಡುಪಿ ಹೆಚ್.ಪಿ.ಆರ್. ಫಿಲ್ಡ್ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಹರಿಪ್ರಸಾದ್ ರೈ, ಸಾಹಿತಿ ಪ್ರಮೀಳಾ ದೀಪಕ್ ಪೆರ್ಮುದೆ, ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶಿನಿ ನಿಲಯ ಕ್ರಿಮಿನಾಲಜಿ ವಿಭಾಗದ ಮುಖ್ಯಸ್ಥೆ ಡಾ. ಸರಿತಾ ಡಿಸೋಜ, ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಲೋಕೇಶ್ ಕೂಳೂರು, ಸಾಮಾಜಿಕ ಕಾರ್ಯಕರ್ತ ಯಜೇಶ್ವರ ಬರ್ಕೆ, ಮಜಿಲ ಕೋರ್ದಬ್ಬು ದೈವಸ್ಥಾನದ ವೆಂಕಪ್ಪ ಪಾತ್ರಿ, ಅಧ್ಯಕ್ಷ ರಮೇಶ್ ಕೋಟ್ಯಾನ್, ಶಬರಿ ಕೇಟರರ್ಸ್ ಮಾಲಕ ರಾಜೇಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಸಾಧಕರಿಗೆ ಸನ್ಮಾನ: ಈ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಕ್ರೀಡಾ ಕ್ಷೇತ್ರದಲ್ಲಿ ಸಂದೀಪ್ ಉಳ್ಳಾಲ್, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಬರ್ಕೆ ಫ್ರೆಂಡ್ಸ್ (ರಿ) ಬರ್ಕೆ, ಕದ್ರಿ ಕ್ರಿಕೆಟರ್ಸ್ ಕ್ಲಬ್ (ರಿ) ಹಾಗೂ ಆಸರೆ ಫ್ರೆಂಡ್ಸ್ ಕದ್ರಿ ಇದರ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.
ಸಮಾರಂಭದದಲ್ಲಿ ಪ್ರಜ್ವಲ್ ಯುವಕ ಮಂಡಲದ ಗೌರವಾಧ್ಯಕ್ಷ ಬಾಬು ಪಿ., ಗೌರವ ಸಲಹೆಗಾರಾದ ಎಸ್. ಜಗದೀಶ್ಚಂದ್ರ ಅಂಚನ್, ಕೆ.ಕೆ. ಪೇಜಾವರ, ಪೃಥ್ವಿರಾಜ್ ಬಂಗೇರ, ಅಧ್ಯಕ್ಷ ಲೋಕೇಶ್ ನಂಬಿಯಾರ್, ಮಾಜಿ ಅಧ್ಯಕ್ಷ ಮಹೇಶ್ ಎಸ್.ವಿ., ಉಪಾಧ್ಯಕ್ಷ ರವೀಂದ್ರ, ಪದಾಧಿಕಾರಿಗಳಾದ ಶರತ್, ಪ್ರಮೋದ್, ಕಿಶೋರ್ ಕುಮಾರ್, ಸೃಜನ್ ಪೇಜಾವರ, ವಿವೇಕ್, ಪ್ರದೀಪ್, ಸುರಕ್ಷಿತ್, ಅಭಿಲಾಷ್, ಎಸ್. ಜಗನ್ನಾಥ್, ಯಾದವ್, ಲಕ್ಷ್ಮಣ್ ಪಡೀಲ್, ಕಿಶೋರ್, ಜನಾರ್ದನ ಮತ್ತಿತರರು ಉಪಸ್ಥಿತರಿದ್ದರು.