16ನೇ ವಷ೯ದ ಪಣಪಿಲ 'ಜಯ-ವಿಜಯ' ಜೋಡುಕರೆ ಕಂಬಳ: ಫಲಿತಾಂಶ
Sunday, November 16, 2025
ಮೂಡುಬಿದಿರೆ: ತಾಲೂಕಿನ ಪಣಪಿಲದಲ್ಲಿ ನಂದೊಟ್ಟು ಯುವರಾಜ್ ಜೈನ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಮಧ್ಯರಾತ್ರಿ ವರೆಗೆ ನಡೆದ 16ನೇ ವಷ೯ದ 'ಜಯ-ವಿಜಯ' ಜೋಡುಕರೆ ಕಂಬಳದ ಫಲಿತಾಂಶ ನೇಗಿಲು ಹಿರಿಯ- 13 ಜತೆ, ನೇಗಿಲು ಕಿರಿಯ: 70 ಜತೆ, ಹಗ್ಗ ಕಿರಿಯ: 19 ಜತೆ ಹೀಗೆ ಒಟ್ಟು 102 ಕೋಣಗಳು ಭಾಗವಹಿಸಿದ್ದವು.
ನೇಗಿಲು ಹಿರಿಯ:
ಪ್ರಥಮ ಹಾಗೂ ದ್ವಿತೀಯ: ಕೌಡೂರುಬೀಡು ತುಷಾರ್ ಮಾರಪ್ಪ ಭಂಡಾರಿ A & B
( ಓಡಿಸಿದವರು: ಭಟ್ಕಳ ಶಂಕರ & ಉಜಿರೆ ಸ್ಪಂದನ್ ಶೆಟ್ಟಿ)
ನೇಗಿಲು ಕಿರಿಯ:
ಪ್ರಥಮ: ಮೂಲ್ಕಿ ಚಿತ್ರಾಪು ಸಾನದ ಮನೆ ಅಂಬಿಕಾ ರವೀಂದ್ರ ಪೂಜಾರಿ
ದ್ವಿತೀಯ: ಪಣಪಿಲ ಫ್ರೆಂಡ್ಸ್ ಯುವ ಬಾಂಧವರು.
( ಓಡಿಸಿದವರು: ಬಾರಾಡಿ ಸತೀಶ್ ಸಪಳಿಗ & ಇಳಿಯೂರು ದಿನೇಶ್ ಪೂಜಾರಿ)
ಹಗ್ಗ ಕಿರಿಯ:
ಪ್ರಥಮ: ಮೂಡಾರ್ ಹಚ್ಚೊಟ್ಟು ಫ್ಲೋರ ನಿವಾಸ ರೋಹನ್ ರಂಜಿತ್ ಫೆರ್ನಾಂಡಿಸ್
ದ್ವಿತೀಯ: ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ನರಸಿಂಹ ಶೆಟ್ಟಿ.
( ಓಡಿಸಿದವರು: ಬೈಂದೂರು ವಿವೇಕ್ ಪೂಜಾರ್ & ಮಂಗಲ್ಪಾಡಿ ರಕ್ಷಿತ್ ಶೆಟ್ಟಿ).
ಯಶಸ್ವಿಯಾದ ಮೊದಲ ಕಂಬಳ : ಪಣಪಿಲದಲ್ಲಿ ನಡೆದ ಈ ಋತುವಿನ ಮೊದಲ ಕಂಬಳ ಶಿಸ್ತು ಹಾಗೂ ಸಮಯ ಪ್ರಜ್ಞೆಯೊಂದಿಗೆ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಕಂಬಳ ಸಮಿತಿಯ ಗೌರವಾಧ್ಯಕ್ಷ ಸುಭಾಶ್ಚಂದ್ರ ಚೌಟ, ಉಪಾಧ್ಯಕ್ಷ ಮುನಿರಾಜ್ ಹೆಗ್ಡೆ, ಪ್ರಧಾನ ಅಶ್ವಥ್ ಪಣಪಿಲ ಹಾಗೂ ಸಮಿತಿಯ ಪದಾಧಿಕಾರಿಗಳ ಪರಿಶ್ರಮದಿಂದಾಗಿ ಕಂಬಳ ಉತ್ತಮ ರೀತಿಯಲ್ಲಿ ನಡೆಯಲು ಕಾರಣವಾಯಿತು.

