ನೋಟೀಸ್ ನೀಡದೆ ಸರ್ವೆ ನಡೆಸಿದ ಸರ್ವೇಯರ್ ವಿರುದ್ಧ ಶಾಸಕರಿಗೆ ದೂರು: ಸರ್ವೇಯರ್ ಗೂಂಡಾವರ್ತನೆಗೆ ಖಂಡನೆ
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಈ ಬಗ್ಗೆ ಪರಿಶೀಲಿಸಿ ಸೂಕ್ತ ಕೈಗೊಳ್ಳಲಾಗುವುದು. ಜಮೀನು ಅಳತೆ ಮಾಡುವ ಮೊದಲು ಪಕ್ಕದ ಜಮೀನು ಅವರಿಗೆ ಮುಂಚಿತವಾಗಿ ನೋಟೀಸು ನೀಡಬೇಕು. ನಕ್ಷೆ ಪ್ರಕಾರವೇ ಅಳತೆ ಮಾಡಿ ಗುರುತುಗಳಿಗೆ ಗಡಿಕಲ್ಲು ಅಳವಡಿಸಬೇಕಾಗಿದೆ. ಗಡಿ ಕಲ್ಲು ಎಲ್ಲೆಲ್ಲೋ ಅಳವಡಿಸಿ ಗಡಿ ಗುರುತು ಕಾರ್ಯ ಮುಗಿದ ಮೇಲೆ ಪಕ್ಕದ ಜಮೀನುರವರನ್ನು ಫೋನ್ ಕರೆ ಮಾಡಿ ಕರೆದಿದ್ದಾರೆ ಎಂದು ತಿಳಿದು ಬಂದಿದೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪಕ್ಕದ ಜಮೀನುದಾರರಿಗೆ ಉಢಾಫೆ ಉತ್ತರ ನೀಡಿದ ಸರ್ವೇಯರ್, ಸರ್ವೇ ಹೇಗೆ ಮಾಡಬೇಕೆಂಬುದು ನಮಗೆ ಗೊತ್ತಿದೆ, ನಿಮ್ಮನೆಲ್ಲ ಕೇಳಿ ಸರ್ವೇ ಮಾಡಬೇಕಾದ ಅಗತ್ಯವಿಲ್ಲ ಎಂದಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಕಾನೂನು ಪಾಲಿಸದ ಇಂಥಹವರು ಸರಕಾರಿ ನೌಕರಿ ಮಾಡಲು ಅನರ್ಹರು...! ಮೇಲಾಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕಾಪು ತಹಶೀಲ್ದಾರರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ ಎಚ್ಚರಿಸಿದ್ದಾರೆ.