ಮೂಡುಬಿದಿರೆಯಲ್ಲಿ ಕರಕುಶಲ ಮತ್ತು ಖಾದ್ಯ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಆರಂಭ

ಮೂಡುಬಿದಿರೆಯಲ್ಲಿ ಕರಕುಶಲ ಮತ್ತು ಖಾದ್ಯ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಆರಂಭ


ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ಮಿಡ್‍ಟೌನ್ ವತಿಯಿಂದ ಇಲ್ಲಿನ ಸಮಾಜ ಮಂದಿರದಲ್ಲಿ ಎರಡು ದಿನ ನಡೆಯುವ ಕ್ರಾಫ್ಟ್ ಮತ್ತು ಕ್ರಂಬ್ಸ್ ಕರಕುಶಲ ಮತ್ತು ಖಾದ್ಯ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಶನಿವಾರ ಪ್ರಾರಂಭವಾಯಿತು. 

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಅಭಯಚಂದ್ರ ಜೈನ್ ಮಹಿಳೆಯರು ಮನೆಯಲ್ಲೆ ತಯಾರಿಸಿದ ಕರಕಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಿದ ರೋಟರಿ ಮಿಡ್‍ಟೌನನ್ನು ಶ್ಲಾಘಿಸಿದ ಅವರು ಈ ಅವಕಾಶ ಮಹಿಳೆಯರ ಸ್ವಾವಲಂಬಿ ಬದುಕಿಗೆ ಪ್ರೇರಣೆಯಾಗಲಿ ಎಂದರು. 


ಸ್ಪೂರ್ತಿ ವಿಶೇಷ ಶಾಲೆಯ ಶಿಕ್ಷಕಿ ಸುಚಿತ್ರ ಎನ್.ಪೂಜಾರಿ ಮಾತನಾಡಿ ನಮ್ಮ ಶಾಲೆಯ ವಿಶೇಷ ಸಾಮಥ್ರ್ಯದ ಮಕ್ಕಳಿಗೆ ಕರಕುಶಲ ವಸ್ತುಗಳ ತಯಾರಿಕೆಗೆ ತರಬೇತಿ ನೀಡಿವುದರ ಜತೆಗೆ ಅವರ ಕೌಶಲ ವೃದ್ಧಿಗು ಉತ್ತೇಜನ ನೀಡಲಾಗುತ್ತಿದೆ ಎಂದರು. ಜ್ಞಾನದೀಪ ಕೋಚಿಂಗ್ ಸೆಂಟರ್‍ನ ಮುಖ್ಯಸ್ಥೆ ಎಸ್.ವೈ ಪದ್ಮಜ, ರೋಟರಿ ಮಿಡ್‍ಟೌನ್‍ನ ಮಾಜಿ ಅಧ್ಯಕ್ಷ ಮಹ್ಮದ್ ಅಸ್ಲಂ, ನಿಕಟಪೂರ್ವ ಅಧ್ಯಕ್ಷ ವಿದೇಶ್, ರೋಟರಿ ಕ್ಲಬ್‍ನ ಹಿರಿಯ ಸದಸ್ಯ ಪ್ರತಾಪ್ ಕುಮಾರ್ ಉಪಸ್ಥಿತರಿದ್ದರು.

ತನುಶ್ರೀ ಧೀರಜ್ ಅವರು ಮನೆಯಲ್ಲೆ ತಯಾರಿಸಿದ `ಬ್ಲಿಸ್ ಬೈಟ್' ಆಹಾರ ಉತ್ಪನ್ನಗಳನ್ನು ಬಿಡುಗಡೆಗೊಳಿಸಲಾಯಿತು. ರೋಟರಿ ಮಿಡ್‍ಟೌನ್ ಅಧ್ಯಕ್ಷ ಕರುಣಾಕರ ದೇವಾಡಿಗ ಸ್ವಾಗತಿಸಿದರು. ಪ್ರಶಾಂತ್ ಭಂಡಾರಿ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article