ಮೂಡುಬಿದಿರೆಯಲ್ಲಿ ಜವನೆರ್ ಬೆದ್ರ ನಿಮಾ೯ಣದ "ವೀರರಾಣಿ ಅಬ್ಬಕ್ಕ" ಪ್ರತಿಮೆ ಲೋಕಾಪ೯ಣೆ

ಮೂಡುಬಿದಿರೆಯಲ್ಲಿ ಜವನೆರ್ ಬೆದ್ರ ನಿಮಾ೯ಣದ "ವೀರರಾಣಿ ಅಬ್ಬಕ್ಕ" ಪ್ರತಿಮೆ ಲೋಕಾಪ೯ಣೆ


ಮೂಡುಬಿದಿರೆ: ಇಲ್ಲಿನ ಚೌಟರ ಅರಮನೆಯ ಮುಂಭಾಗದಲ್ಲಿ ಜವನೆರ್ ಬೆದ್ರ ಫೌಂಡೇಶನ್ ವತಿಯಿಂದ ನಿರ್ಮಿಸಲಾದ ಸುಮಾರು 6.5 ಅಡಿ ಎತ್ತರದ ವೀರರಾಣಿ ಅಬ್ಬಕ್ಕ ಪ್ರತಿಮೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಶನಿವಾರ ಲೋಕಾರ್ಪಣೆಗೊಳಿಸಿದರು.

ನಂತರ ಮಾತನಾಡಿದ ಅವರು ಓವ೯ ಮಹಿಳೆಯಾಗಿ ಹಿಂದಿನ ಕಾಲದಲ್ಲಿ ಸ್ವಾತಂತ್ರ್ಯಕ್ಕಾಗಿ ಪೋರ್ಚುಗೀಸರ ವಿರುದ್ಧ ಅನೇಕ ಯುದ್ಧಗಳನ್ನು ಮಾಡಿರುವ ವೀರರಾಣಿ ಅಬ್ಬಕ್ಕಳ ಇತಿಹಾಸವನ್ನು ಪರಿಚಯಿಸುವ ಅವಶ್ಯಕತೆಯಿದ್ದು ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ  ಆಕೆಯ ಪರಿಚಯದ ಕುರಿತು ಪಠ್ಯದಲ್ಲಿ ಸೇರಿಸುವ ಪ್ರಯತ್ನ ಮಾಡಲಾಗುವುದೆಂದು ತಿಳಿಸಿದ ಅವರು ಅಮರ್ ಕೋಟೆಯ ಈ ಯೋಜನೆಯು ಶ್ಲಾಘನೀಯ ಎಂದು ಅಭಿನಂದಿಸಿದರು. 


ಜೈನ ಮಠದ ಸ್ವಾಮೀಜಿ ಮಾತನಾಡಿ, ಅಮರ್ ಕೋಟೆಯ ಜವನೆರ್ ಬೆದ್ರ ತಂಡದ ಹಲವು ದಿನಗಳ ದೀಘ೯ ಪ್ರಯತ್ನ ದಿಂದಾಗಿ ರಾಣಿ ಅಬ್ಬಕ್ಕ ದೇವಿಯ ಪ್ರತಿಮೆಯು ಉತ್ತಮವಾಗಿ ಮೂಡಿ ಬರುವ ಮೂಲಕ ಶಾಶ್ವತವಾಗಿ ಉಳಿಯುವಂತ್ತಾಗಿದೆ. ಮುಂದೆಯೂ ಕೋಟೆ ಅವರ ನಾಯಕತ್ವದಲ್ಲಿ ಉತ್ತಮ ಕೆಲಸಗಳು ಮೂಡಿ ಬರಲಿ ಎಂದು ಶುಭ ಹಾರೈಸಿದರು. 

ಮಾಜಿ ಸಚಿವ ಕೆ. ಅಭಯಚಂದ್ರ, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ, ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಮುಖ್ಯಾಧಿಕಾರಿ ಇಂದು ಎಂ, ಸದಸ್ಯರಾದ ಪುರಂದರ ದೇವಾಡಿಗ, ಕೊರಗಪ್ಪ, ಸುರೇಶ್ ಕೋಟ್ಯಾನ್, ಇಕ್ಬಾಲ್ ಕರೀಮ್, ಮಮತಾ ಅನಂದ್, ಶಕುಂತಳಾ ಹರೀಶ್, ಪುರಸಭಾ ಮಾಜಿ ಅಧ್ಯಕ್ಷೆ ಹರೀಣಾಕ್ಷಿ, ಶಿರ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಗ್ನೇಸ್ ಡಿ’ಸೋಜಾ, ಚೌಟರ ಅರಮನೆಯ ಕುಲದೀಪ್ ಎಂ, ಜವನೆರ್ ಬೆದ್ರದ ಸಂಸ್ಥಾಪಕ ಅಮರ್ ಕೋಟೆ, ಮುಡಾ ಅಧ್ಯಕ್ಷ ಎಂ,ಹರ್ಷವರ್ಧನ ಪಡಿವಾಳ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಜೈನ್, ರುಕ್ಕಯ್ಯ ಪೂಜಾರಿ, ಅನೀಶ್ ಡಿಸೋಜ, ಬಿಜೆಪಿ ಮುಖಂಡರಾದ ಜಗದೀಶ್ ಅಧಿಕಾರಿ, ಸುದರ್ಶನ ಎಂ,ಅಶ್ವಥ್ ಪಣಪಿಲ, ಸುರೇಶ್ ಅಂಚನ್, ಭರತ್ ಶೆಟ್ಟಿ ಇರುವೈಲು, ರಾಜೇಶ್ ಕಡಲಕೆರೆ, ಮತ್ತಿತರ ಪ್ರಮುಖರು, ಜವನೆರ್ ಬೆದ್ರ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಂದೀಪ್ ಕೆಲ್ಲಪುತ್ತಿಗೆ ಕಾಯ೯ಕ್ರಮ ನಿರೂಪಿಸಿ, ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article