ಆಳ್ವಾಸ್ ಸೆಂಟ್ರಲ್ ಸ್ಕೂಲ್‌ನ ಎಂಟನೇ ವರ್ಷದ ಶಾಲಾ ವಾರ್ಷಿಕೋತ್ಸವ
ಈ ಪರಿವರ್ತನೆಗೆ ನಮ್ಮ ಶಿಕ್ಷಣ ಪದ್ಧತಿ, ಶಿಕ್ಷಕರು ಹಾಗೂ ಪೋಷಕರು ಮುಖ್ಯ ಕಾರಣವಾಗಿದ್ದಾರೆ. ಮಕ್ಕಳ ಕುತೂಹಲ ಬೆಳೆಯುವುದು ಅವರ ಪ್ರಶ್ನೆಯನ್ನು ಜೀವಂತವಾಗಿಡುವ ಮೂಲಕ. ಶಿಕ್ಷಕರು ಎಲ್ಲವನ್ನೂ ಬೋಧಿಸಬೇಕಾಗಿಲ್ಲ, ಬದಲಿಗೆ ತಿಳಿಯುವ ಆಸೆ ಉಳಿಯುವಂತೆ ಬೆಂಬಲಿಸಬೇಕು. ಪೋಷಕರು ಪಾಠವನ್ನು ಕೇವಲ ಪುಸ್ತಕದಲ್ಲಿ ಅಲ್ಲ, ಜೀವನದಲ್ಲೂ ಕಂಡುಕೊಳ್ಳುವAತೆ ಮಾರ್ಗದರ್ಶನ ನೀಡಬೇಕು. ಪೋಷಕರು ಪ್ರೋತ್ಸಾಹಿಸಿದರೆ ಕುತೂಹಲದಿಂದ ಕಲಿಯುವ ಮಗು ನಾಳೆ ಸಮಾಜಕ್ಕೆ ಜವಾಬ್ದಾರಿಯುತ, ವಿಚಾರಶೀಲ, ಮೌಲ್ಯಯುತ ನಾಗರಿಕನಾಗುತ್ತಾನೆ. ಇದೇ ನಿಜವಾದ ಶಿಕ್ಷಣದ ಗುರಿ ಮತ್ತು ಅದನ್ನು ಸಾಧಿಸುವ ಮೊದಲ ಹೆಜ್ಜೆ ಮನೆಯಿಂದಲೇ ಆರಂಭವಾಗಬೇಕಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರತೀ ಸಂಸ್ಥೆಯ ವಿದ್ಯಾರ್ಥಿ ಸಮೂಹದಲ್ಲಿ ವೈವಿಧ್ಯತೆಯನ್ನು ಕಾಣಬಹುದು. ಇಲ್ಲಿ ಕಲಿಯುವ ಸಾವಿರಾರು ವಿದ್ಯಾರ್ಥಿಗಳ ನಡುವೆ ಕಂಡುಬರುವ ಸಂಸ್ಕೃತಿ, ಭಾಷೆ, ಪರಂಪರೆ, ಕಲಿಕಾ ಶೈಲಿ ಮತ್ತು ವೈಯಕ್ತಿಕ ಸಾಮರ್ಥ್ಯಗಳ ವೈವಿಧ್ಯತೆಯೇ ಇಲ್ಲಿನ ನಿಜವಾದ ಬಲ. ಈ ಸಂಗಮ, ಈ ಒಂದಾಗುವಿಕೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅನನ್ಯತೆಗೆ ಹಿಡಿದ ಕೈಗನ್ನಡಿ ಎಂದರು.
ದೇಶಿಯ ಮಟ್ಟದಲ್ಲಿ ನಡೆದ ಸಂಶೋಧನಾ ಚಟುವಟಿಕೆಯಲ್ಲಿ ಪಾಲ್ಗೊಂಡು, ಟಾಪ್ 50ರಲ್ಲಿ ಆಯ್ಕೆಗೊಂಡಿರುವ ವಿದ್ಯಾರ್ಥಿನಿ ಗ್ಲೋರಿ ಪ್ರಕಾಶ್‌ಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ , ಆಳ್ವಾಸ್ ಶಾಲೆಯ ಆಡಳಿತಾಧಿಕಾರಿ ವಿ.ಪ್ರೀತಮ್ ಕುಂದರ್, ಪ್ರಾಚರ‍್ಯ ಮೊಹಮ್ಮದ್ ಶಫಿ ಸೇರಿದಂತೆ ಇನ್ನಿತರ ಗಣ್ಯರು ಇದ್ದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕರ‍್ಯಕ್ರಮ ನಡೆಯಿತು. ಸಭಾ ಕರ‍್ಯಕ್ರಮವನ್ನು ದಿಶಾ, ವಿಷ್ಣು ಪ್ರಿಯಾ ನಿರೂಪಿಸಿ, ವರ್ಷಾ ವಂದಿಸಿದರು.
