ಡಾ. ಡಿ. ವಿರೇಂದ್ರ ಹೆಗ್ಗಡೆ ಜನ್ಮ ದಿನಾಚರಣೆ: ಸ್ಪೂತಿ೯ ವಿಶೇಷ ಶಾಲೆಯ ಮಕ್ಕಳಿಗೆ ಆಹಾರ ಸಾಮಾಗ್ರಿ ವಿತರಣೆ
Tuesday, November 25, 2025
ಮೂಡುಬಿದಿರೆ: ಶ್ರೀ ಕ್ಷೇತ್ರ ಧಮ೯ಸ್ಥಳದ ಧಮಾ೯ಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಅವರ ಹುಟ್ಟು ಹಬ್ಬದ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಮೂಡುಬಿದಿರೆ ತಾಲೂಕು ವತಿಯಿಂದ ಬೆಳುವಾಯಿಯ ಸ್ಫೂರ್ತಿ ಭಿನ್ನ ಸಾಮರ್ಥ್ಯ ಹಾಗೂ ತರಬೇತಿ ಕೇಂದ್ರದ 91 ಮಕ್ಕಳಿಗೆ ಆಹಾರ ಸಾಮಗ್ರಿ ಹಾಗೂ ಹಣ್ಣು ಹಂಪಲನ್ನು ಮಂಗಳವಾರ ವಿತರಿಸಲಾಯಿತು.
ತಾಲೂಕಿನ ಯೋಜನಾಧಿಕಾರಿ ಧನಂಜಯ ಅವರು ಆಹಾರ ಸಾಮಾಗ್ರಿ ವಿತರಣೆ ಮಾಡಿ ಮಕ್ಕಳಿಗೆ ಶುಭ ಹಾರೈಕೆಗೈದರು.
ವಿಶೇಷ ಮಕ್ಕಳು ಹೆಗ್ಗಡೆ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳಿದರು.
ಗ್ರಾಮಾಭಿವೃದ್ಧಿ ಯೋಜನೆಯ ಲೆಕ್ಕ ಪರಿಶೋಧಕ ನಾಗೇಶ್, ವಿಶೇಷ ಶಾಲೆಯ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಪ್ರಕಾಶ್ ಜೆ.ಶೆಟ್ಟಿಗಾರ್, ಸಂಸ್ಥೆಯ ಮುಖ್ಯ ಶಿಕ್ಷಕಿ ಶರ್ಮಿಳಾ ವಾಸ್, ಸಹಾಯಕ ಆಡಳಿತ ಅಧಿಕಾರಿ ಅನಿತಾ ರೋಡ್ರಿಗಸ್, ಒಕ್ಕೂಟದ ಅಧ್ಯಕ್ಷ ಸಂತೋಷ್, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
