ಸಿ.ಎಸ್.ಇ.ಇ.ಟಿ. ಪರೀಕ್ಷೆ ಫಲಿತಾಂಶ: ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ
Wednesday, November 26, 2025
ಮೂಡುಬಿದಿರೆ: 2025 ನವೆಂಬರ್ ನಲ್ಲಿ ನಡೆದ ಸಿ.ಎಸ್.ಇ.ಇ.ಟಿ. ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿಗಳಾದ ವರ್ಷಾ ಕೋಟ್ಯಾನ್, ರ‍್ಯಾನ್ ಮಾಸ್ಕರೇನ್ಹಸ್, ಸುಪ್ರೀತಾ ಎಂ. ಕೆ., ಸಿಂಚನಾ, ವೀಕ್ಷಾ , ಮನೀಷಾ, ರಿಯಾ ಅಂಜುಮ್, ಸಿ. ಜ್ನಾನಿಕಾ ಶೆಟ್ಟಿ, ವೈಷ್ಣವಿ ರಾಜೇಶ್ ರೇನಕೆ ಹಾಗೂ ಅಭಿಷ್ ಆಚರ‍್ಯ ಮೊದಲ ಪ್ರಯತ್ನದಲ್ಲಿ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ. ಈ ಮೂಲಕ ಆಳ್ವಾಸ್ ಕಾಲೇಜು 77% ದಷ್ಟು ಫಲಿತಾಂಶ ದಾಖಲಿಸಿದೆ.
ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಪ್ರಾಂಶುಪಾಲ ಡಾ.ಕುರಿಯನ್, ವೃತ್ತಿಪರ ವಾಣಿಜ್ಯ ವಿಭಾಗದ ಸಂಯೋಜಕರಾದ ಅಶೋಕ ಕೆ.ಜಿ ಹಾಗೂ ಸಿ.ಎಸ್. ಸಂಯೋಜಕರಾದ ದೀಕ್ಷಾ ಅಸ್ರಣ್ಣ ಅಭಿನಂದಿಸಿದ್ದಾರೆ.
