ಫಿಲೋಮಿನಾ ಪ.ಪೂ ಕಾಲೇಜಿಗೆ ‘ಅಟರ್ನಸ್-2025’ ಅಂತರ್ ಕಾಲೇಜು ಮಟ್ಟದ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ
Monday, November 24, 2025
ಪುತ್ತೂರು: ಅಕ್ಷಯ ಕಾಲೇಜು ಪುತ್ತೂರು ಇದರ ಆಶ್ರಯದಲ್ಲಿ ನ.21 ರಂದು ನಡೆದ ‘ಅಟರ್ನಸ್-2025’ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಅಂತರ್ ಕಾಲೇಜು ಮಟ್ಟದ ವಿವಿಧ ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿಯನ್ನು ಪಡೆದುಕೊಂಡಿದೆ.
ವೈಯಕ್ತಿಕ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ನಿಕಿತಾ ಪ್ರಥಮ ಹಾಗೂ ಪ್ರಥಮ ವಾಣಿಜ್ಯ ವಿಭಾಗದ ತನೀಶ್ ತೃತೀಯ, ವೆಲ್ತ್ ಔಟ್ ಆಫ್ ವೇಸ್ಟ್ ಸ್ಪರ್ಧೆಯಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ತನ್ವಿ ತೃತೀಯ ಹಾಗೂ ಇಂಗ್ಲೀಷ್ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ವಿಜ್ಞಾನ ವಿಭಾಗದ ಆಯಿಷಾತ್ ರಜನಾ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ರದರ್ಶನ ಕಲಾ ಸಂಘದ ಸುಮನಾ ರಾವ್, ಉಷಾ ರೈ, ಅವಿನಾ ಮಾಡ್ತಾ, ಡಾ. ಲತಾ ಹಾಗೂ ಸಂದೇಶ್ ಜಾನ್ ಲೋಬೋ ಉಪಸ್ಥಿತರಿದ್ದರು.