ಕುಕ್ಕೆಯಲ್ಲಿ ಚೌತಿಯಂದು 110 ಭಕ್ತರಿಂದ ಎಡ ಸ್ನಾನ
Monday, November 24, 2025
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾ ಷಷ್ಟಿ ಜಾತ್ರಾ ಮಹೋತ್ಸವದ ಮೂರು ದಿನಗಳಲ್ಲಿ (ಚೌತಿ,ಪಂಚಮಿ, ಷಷ್ಟಿ) ಅಂತೆ ಸೋಮವಾರ ಚೌತಿಯಂದು ದೇವಳದ ಹೊರಾಂಗಣದಲ್ಲಿ ಸುತ್ತಲು ಹಾಕಿದ ಬಾಳೆ ಎಲೆ, ಅದಕ್ಕೆ ಬಡಿಸಿದ ದೇವರ ನೈವೇದ್ಯ, ಅವುಗಳನ್ನು ಗೋವುಗಳಿಂದ ತಿನ್ನಿಸಿ ಬಳಿಕ ಹರಕೆ ಹೊತ್ತ 110 ಸೇವಾರ್ಥಿಗಳು ಎಡೆಸ್ನಾನ ಉರುಳು ಸೇವೆಯನ್ನು ನೆರವೇರಿಸಿದರು.
ಅದಕ್ಕೂ ಮೊದಲು ಸೇವೆಯಿಂದ ಮಾಡುವ ಭಕ್ತರು ದರ್ಪಣ ತೀರ್ಥದಲ್ಲಿ ಮಿಂದು ಅಲ್ಲಿಂದ ಸರತಿ ಸಾಲಿನಲ್ಲಿ ಬಂದುಬಂದು ಎಡೆ ಸ್ನಾನ ಸೇವೆಯನ್ನು ನೆರವೇರಿಸಿರುವರು.
ಆಗಮ ಶಾಸ್ತ್ರ ಪಂಡಿತರು, ಶ್ರೀ ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯರು, ಆರಕ್ಷಕ ಅಧಿಕಾರಿಗಳು, ದೇವಳದ ಅಧಿಕಾರಿಗಳು, ಭದ್ರತಾ ಸಿಬ್ಬಂದಿಯವರು ಹಾಗೂ ನೌಕರರು ಉಪಸ್ಥಿತರಿದ್ದರು.

