ಕುಕ್ಕೆಯಲ್ಲಿ ಗುರುವಾರ ರಾತ್ರಿ ಪಂಚಮಿ ರಥೋತ್ಸವ
Monday, November 24, 2025
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ವಾರ್ಷಿಕ ಚಂಪಾ ಷಷ್ಠಿ ಜಾತ್ರೋತ್ಸವದ ಈ ದಿನ ಗುರುವಾರ ರಾತ್ರಿ ಪಂಚಮಿ ರಥೋತ್ಸವ ಹಾಗೂ ತೈಲಾ ಬ್ರಾಂಜನ ನಡೆಯಲಿರುವುದು. ಪಂಚಮಿ ಯಂದು ರಾತ್ರಿ ಶ್ರೀ ದೇವಳದಲ್ಲಿ ಮಹಾಪೂಜರಂತರ ಅಂಗಣದಲ್ಲಿ ಬಂಡೆ ಉತ್ಸವ ನಡೆದು ನಂತರ ಪಲ್ಲಕ್ಕಿಯಲ್ಲಿ ರಥ ಬೀದಿಗೆ ಬಂದು ವಿವಿಧ ಸಂಗೀತ ವಾದ್ಯಗಳ ಅನೇಕ ನಾದಮಯ ಸುತ್ತುಗಳಲ್ಲಿ ತಲ್ಲಿನಾದ ಕುಮಾರಸ್ವಾಮಿಯು ಪಂಚಮಿ ರಥದಲ್ಲಿ ವಿರಾಜಮಾನ ಆಗುತ್ತಾನೆ.
ಜಗ ಮಗಿಸುವ ವಿದ್ಯುತ್ ದೀಪದ ಅಲಂಕಾರದೊಂದಿಗೆ ತಳಿರು ತೋರಣ ಸಿಯಾಳ ಅಡಿಕೆ ಮುಂತಾದ ಫಲ ವಸ್ತುಗಳಿಂದ ಸಿಂಗಾರಗೊಂಡ ರಥದಲ್ಲಿ ಗಾಂಭೀರ್ಯದಿಂದ ಭಕ್ತ ಜನರ ನಡುವೆ ರಥಬೀದಿಯ ಮುಖ್ಯರಸ್ತೆಯಲ್ಲಿ ಕಾಶಿ ಕಟ್ಟೆ ವರೆಗೆ ಬಂದು ನಂತರ ಸವಾರಿಮಂಟಪದಲ್ಲಿ ಕಟ್ಟೆ ಪೂಜೆ ನೆರವೇರಲಿರುವುದು. ನಂತರ ತೈಲ ಬ್ರಂಜನ ನೆರವೇರಲಿರುವುದು.