ಮಾಸ್ತಿಅಮ್ಮ ದೇವಸ್ಥಾನದ ಪ್ರಧಾನ ಅರ್ಚಕ ಬಾಲಕೃಷ್ಣ ಗಾಂಸ್ಕರ್ ವಿಧಿವಶ

ಮಾಸ್ತಿಅಮ್ಮ ದೇವಸ್ಥಾನದ ಪ್ರಧಾನ ಅರ್ಚಕ ಬಾಲಕೃಷ್ಣ ಗಾಂಸ್ಕರ್ ವಿಧಿವಶ


ಉಡುಪಿ: ಉಡುಪಿ ಅಂಬಾಗಿಲು ಸಂತೆಕಟ್ಟೆಯ ಮಾಸ್ತಿಅಮ್ಮ ದೇವಸ್ಥಾನದ ಪ್ರಧಾನ ಅರ್ಚಕ ಬಾಲಕೃಷ್ಣ ಗಾಂಸ್ಕರ್ (90) ಅವರು ಶನಿವಾರ ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು.

ಇವರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. 

ಚತುರ ಸಂಘಟಕ:

ಹಲವಾರು ದಶಕಗಳಿಂದ ಮಾಸ್ತಿಅಮ್ಮನವರ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾಗಿದ್ದ ಇವರು, ಆಗಮಿಸುವ ಪ್ರತಿಯೊಬ್ಬ ಭಕ್ತರ ಬಗ್ಗೆ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡುತ್ತಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಷ್ಟಾವಂತ ಕಾರ್ಯಕರ್ತರಾಗಿದ್ದ ಇವರು ಪರಿಸರದಲ್ಲಿ ಅಜಾತಶತ್ರುವಾಗಿದ್ದರು.

ಭಗವದ್ಗೀತೆಯ ನಂಟು:

ಭಗವದ್ಗೀತೆಯ ಬಗ್ಗೆ ಆಳವಾದ ಜ್ಞಾನ ಮತ್ತು ಆಸಕ್ತಿಯನ್ನು ಹೊಂದಿದ ಇವರು ಅನೇಕ ಭಕ್ತರಿಗೆ ಗೀತಾ ಪಠಣ ಆರಂಭಿಸಲು ಪ್ರೇರಣೆ ನೀಡಿದ್ದರು. ನವೆಂಬರ್ 15 ರಂದು ಏಕಾದಶಿಯಂದೇ ಇವರು ನಿಧನರಾಗಿದ್ದ ವಿಚಾರಕ್ಕೆ ಮತ್ತು ಶ್ರೀ ಕೃಷ್ಣ ಬೋಧಿಸಿದ ಭಗವದ್ಗೀತೆಯ ಬಗ್ಗೆ ಇವರಲ್ಲಿದ್ದ ಪ್ರೀತಿಗೆ ಸಂಬಂಧ ಹುಡುಕಿದರೂ ತಪ್ಪಾಗದು.

ಗಣ್ಯರ ಸಂತಾಪ:

ಬಾಲಕೃಷ್ಣ ಗಾಂಸ್ಕರ್ ನಿಧನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಶಾಸಕ ಕೆ. ರಘುಪತಿ ಭಟ್, ನಗರಸಭಾ ಸದಸ್ಯರಾದ ಮಂಜುಳಾ ವಿ ನಾಯಕ್ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article