ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ   ಕನ್ನಡ ರಾಜ್ಯೋತ್ಸವ

ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ


ಉಳ್ಳಾಲ: ಪತ್ರಕರ್ತ ಮನೋಹರ್ ಪ್ರಸಾದ್ ಅವರೇ ನನ್ನ ಮಾಧ್ಯಮ ವೃತ್ತಿ ಜೀವನಕ್ಕೆ ಪ್ರೇರಣೆಯಾಗಿದ್ದರು. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ರಾಜಕೀಯ ನಾಯಕರು, ಸಿನೆಮಾ ಸೆಲೆಬ್ರಿಟಿಗಳು, ಕ್ರೀಡಾಪಟುಗಳ ಬಗೆಗಿನ ವರದಿಗಳನ್ನು ನಿರ್ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಖ್ಯಾತ ಜಾನಪದ ಸಂಸ್ಕೃತಿ ಚಿಂತಕ ಕದ್ರಿ ನವನೀತ್ ಶೆಟ್ಟಿ ಹೇಳಿದರು.

ಅವರು ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಕುತ್ತಾರಿನ ಖಾಸಗಿ ಸಭಾಂಗಣದಲ್ಲಿ ಶನಿವಾರದಂದು ನಡೆದ ಕನ್ನಡ ರಾಜ್ಯೋತ್ಸವ ಮತ್ತು ಅಗಲಿದ ಹಿರಿಯ ಪತ್ರಕರ್ತ ದಿ.ಮನೋಹರ ಪ್ರಸಾದ್ ಸಂಸ್ಮರಣೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ವೇಳೆ ಹಿರಿಯ ಪತ್ರಕರ್ತರಾದ ಆನಂದ ಶೆಟ್ಟಿ, ವಿದ್ಯಾಧರ ಶೆಟ್ಟಿ, ಛಾಯಾಗ್ರಾಹಕ ಅಶೋಕ್ ಉಳ್ಳಾಲ್ ಮತ್ತು ಏಷಿಯನ್ ಕ್ಲಾಸಿಕ್ ಆಂಡ್ ಎಕ್ವಿಪ್ಡ್ ಬೆಂಚ್ ಚಾಂಪಿಯನ್ಶಿಪ್ 2025 ರಲ್ಲಿ ಭಾರತವನ್ನು ಪ್ರತಿನಿಧಿಸಿ ಸ್ವರ್ಣ ಪದಕವನ್ನು ಗಳಿಸಿದ ಉಳ್ಳಾಲ ನಗರಸಭೆಯ ಸದಸ್ಯೆ ಗೀತಾ ಬಾಯಿ ಅವರನ್ನು ಸನ್ಮಾನಿಸಲಾಯಿತು.

ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ವಸಂತ್ ಎನ್.ಕೊಣಾಜೆ, ಪರಿಸರ ಪ್ರೇಮಿ ಮಾಧವ ಉಳ್ಳಾಲ್, ಉಳ್ಳಾಲ ಸೌತ್‌ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಅಧ್ಯಕ್ಷ ರಾಜೇಶ್ ಉಳ್ಳಾಲ್, ಮಾಜಿ ಅಧ್ಯಕ್ಷ ಚಿದಾನಂದ, ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ಉಪಾಧ್ಯಕ್ಷ ಯು.ಪಿ.ಆಲಿಯಬ್ಬ, ವಾಣಿ ಲೋಕಯ್ಯ, ಶಶಿಕಾಂತಿ ಉಳ್ಳಾಲ್, ವಾಣಿ ಗೌಡ ಉಳ್ಳಾಲ ಬೈಲ್, ರಾಘವ ಮಾಸ್ಟರ್, ರತ್ನಾವತಿ .ಜೆ ಬೈಕಾಡಿ, ಅನುಪಮ.ಸಿ ಬಬ್ಬುಕಟ್ಟೆ , ನಾಗರತ್ನ, ಲತಾ, ಸತೀಶ್ ಭಂಡಾರಿ, ಸರೋಜ, ಜಯಶ್ರೀ ಕೆ, ಶಶಿಕಲಾ ಗಟ್ಟಿ , ಜಯಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.

ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ ಉಳ್ಳಾಲ್ ಸ್ವಾಗತಿಸಿದರು.ಮಾಧವಿ ಉಳ್ಳಾಲ್ ಸನ್ಮಾನಿತರನ್ನ ಪರಿಚಯಿಸಿದರು.ಧನಲಕ್ಷ್ಮಿ ಗಟ್ಟಿ ಮತ್ತು ಕೆ.ಕೆ.ಮಂಜನಾಡಿ ನಿರೂಪಿಸಿದರು.ಸ್ವಪ್ನ‌ ಶೆಟ್ಟಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article