ಎರಡು ನಾಡ ದೋಣಿಗಳಿಗೆ ಬೆಂಕಿ

ಎರಡು ನಾಡ ದೋಣಿಗಳಿಗೆ ಬೆಂಕಿ


ಉಳ್ಳಾಲ: ಉಳ್ಳಾಲ ಎರಡು ನಾಡ ದೋಣಿಗಳು ಬೆಂಕಿ ಹಿಡಿದು ಭಾಗಶಃ ಹಾನಿಯಾದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೋಡಿಯಲ್ಲಿ ನಡೆದಿದ್ದು, ದುಷ್ಕರ್ಮಿಗಳು ಈ ಕೃತ್ಯ ಎಸಗಿರ ಬೇಕು ಎಂದು ಶಂಕಿಸಲಾಗಿದೆ.

ರಮ್ಲತ್ ಅವರ ಮಾಲೀಕತ್ವದ ಹವ್ವ ಹಲೂಮ್, ಆಲಿಯಬ್ಬ ಮಾಲೀಕತ್ವದ ಮೊಹಮ್ಮದ್ ಹಫೀಝ್ ಎಂಬ ಹೆಸರಿನ ಎರಡು ದೋಣಿಗಳಿಗೆ ಬೆಂಕಿ ಹಿಡಿದಿದ್ದು ಈ ಮಾಹಿತಿ ತಿಳಿದು ಆಗಮಿಸಿದ ಮಾಲೀಕರು ಬೆಂಕಿ ನಂದಿಸಿದ್ದಾರೆ.

ಕೋಡಿ ನಿವಾಸಿ ಆಲಿಯಬ್ಬ ಹಾಗೂ ಮೊಯ್ಯದ್ದಿ ಅವರು ನಾಡದೋಣಿಯನ್ನು ಕೋಡಿಯ ನೇತ್ರಾವತಿ ನದಿಯ ದಡದಲ್ಲಿ ನಿಲ್ಲಿಸಿ ಉಳ್ಳಾಲ ಪೇಟೆಗೆ ತೆರಳಿದ್ದರು. ಶನಿವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಇದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಮೀನುಗಾರಿಕೆ ಯನ್ನೇ ವೃತ್ತಿಯಾಗಿಸಿಕೊಂಡು ಜೀವನ ನಡೆಸುವ ನಮಗೆ ತೊಂದರೆ ಆಗಿದೆ ಎಂದು ಆಲಿಯಬ್ಫ ಪತ್ರಿಕೆಗೆ ತಿಳಿಸಿದ್ದಾರೆ. ಈ ಬಗ್ಗೆ ಮೊಯ್ಯದ್ದಿ ಹಾಗೂ ಹಾಗೂ ಆಲಿಯಬ್ಬ ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ಪ್ರತ್ಯೇಕ ಎನ್‌ಸಿಆರ್ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article