ಸೈಕಲ್ ಸವಾರನ್ನನ್ನು ತಪ್ಪಿಸಲು ಹೋಗಿ ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ: ಮೂವರಿಗೆ ಗಾಯ
Thursday, December 4, 2025
ಕಾರ್ಕಳ: ಏಕಾಏಕಿ ರಸ್ತೆಗೆ ಬಂದ ಸೈಕಲ್ ಸವಾರನನ್ನು ಬದುಕಿಸಲು ಹೋಗಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಮೂವರಿಗೆ ಗಾಯಗೊಂಡ ಘಟನೆ ಕಾರ್ಕಳ ಹಿರ್ಗಾನ ಎಂಬಲ್ಲಿ ನಡೆದಿದೆ.
ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಮೂರೂರು ಬಳಿ ಕಾರ್ಕಳ ಹೆಬ್ರಿ ರಾಜ್ಯ ಹೆದ್ದಾರಿ ಮೂಲಕ ತನ್ನ ಕುಟುಂಬದೊಂದಿಗೆ ಹೆಬ್ರಿ ಚಂಥಾರಿನ ಮನೆಗೆ ಹೊಗುತಿದ್ದ ಪಂಚಾಯತ್ ರಾಜ್ ಇಂಜಿನಿಯರ್ ಸದಾನಂದ ನಾಯಕ್ ಅವರ ಕಾರಿನ ಮುಂದೆ ಸೈಕಲ್ ಚಲಾಯಿಸುತ್ತ ಏಕಾಏಕಿ ನುಗ್ಗಿದ ಬಾಲಕನನ್ನು ಉಳಿಸಲು ಬಲಕ್ಕೆ ತಿರುಗಿಸಿ ನಿಯಂತ್ರಣ ತಪ್ಪಿ ಮತ್ತೆ ಎಡ ಭಾಗಕ್ಕೆ ಚಲಿಸಿ ಕಾರು ಪಲ್ಟಿಯಾಗಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ.
ಕಾರು ಕಂಬಕ್ಕೆ ಹೊಡೆದ ರಬಸಕ್ಕೆ ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಕಾರಿನಲ್ಲಿದ್ದ ಸದಾನಂದ ನಾಯಕ್, ಅವರ ಪತ್ನಿ, ಮತ್ತು ಮಗನಿಗೆ ಗಂಭೀರ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಅಪಘಾತದ ದ್ರಶ್ಯ ಸಿಸಿ ಟಿವಿ ದಾಖಲಾಗಿದ್ದು, ವೈರಲ್ ಆಗುತ್ತಿದೆ.