ಮನೆಯಿಂದ ನಗ-ನಗದು ಕಳವು

ಮನೆಯಿಂದ ನಗ-ನಗದು ಕಳವು

ಬಂಟ್ವಾಳ: ತಾಲೂಕಿನ ಕುಕ್ಕಿಪ್ಪಾಡಿ ಗ್ರಾಮದ ಕೊಲೆಜಾಲು ಎಂಬಲ್ಲಿ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಘಟನೆ ಮಂಗಳವಾರ ಹಾಡಹಗಲೇ ನಡೆದಿದೆ.

ಇಲ್ಲಿನ ಪ್ರೆಸಿಲ್ಲ ಎಂಬವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ಇವರು ಮಂಗಳವಾರ ಬೆಳಗ್ಗೆ ತನ್ನ ಮಗನನ್ನು ಸಿದ್ದಕಟ್ಟೆ ಶಾಲೆಗೆ ಬಿಟ್ಟು ಬಳಿಕ ಟೈಲರಿಂಗ್ ಕೆಲಸದ ನಿಮಿತ್ತ ಸಿದ್ದಕಟ್ಟೆಗೆ ತೆರಳುವ ನಿಟ್ಟಿನಲ್ಲಿ ಮನೆಯ ಮುಂಬಾಗಿಲನ್ನು ಒಳಗಿನಿಂದ ಲಾಕ್ ಮಾಡಿ ಭದ್ರಪಡಿಸಿ ಹಿಂಬದಿಯ ಬಾಗಿಲಿಗೆ ಬೀಗ ಹಾಕಿ ಹೋಗಿದ್ದಾರೆ. 

ಮದ್ಯಾಹ್ನ ಸುಮಾರು 2.15 ಗಂಟೆಗೆ ಕೆಲಸ ಮುಗಿಸಿ ಊಟಕ್ಕೆಂದು ಮನೆಗೆ ಬಂದು ಹಿಂಬಾಗಿಲನ್ನು ತೆರೆದು ಒಳ ಬಂದು ಮುಂಬಾಗಿಲ ಲಾಕ್ ತೆರೆಯುವರೇ ನೋಡಿದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ. 

ಯಾರೋ ಕಳ್ಳರು ಮನೆಯ ಬೀಗವನ್ನು ಮುರಿದು ಒಳ ಪ್ರವೇಶಿಸಿ ಮನೆಯ ಒಳಗಿನ ಕೋಣೆಯ ಎರಡೂ ರೂಮಿನ ಗೋದ್ರೇಜು ಕಪಾಟಗಳ ಬಾಗಿಲು ತೆರೆದು ಬಟ್ಟೆ ಬರೆಗಳನ್ನು ಹಾಗೂ ಸೊತ್ತುಗಳನ್ನು ಚೆಲ್ಲಾಪಿಲ್ಲಿಯಾಗಿಸಿದ್ದಲ್ಲದೆ ಮನೆಯ ಡೈನಿಂಗ್ ಹಾಲಿನ ಎದುರು ಬಾಗದ ಮುಂಬಾಗದ ಬೆಡ್ ರೂಮಿನಲ್ಲಿದ್ದ ಗೋದ್ರೇಜಿನ ಬಾಗಿಲು ಮೀಟಿ ಸೇಫ್ಟಿ ಲಾಕರನ್ನು ಮುರಿದು ಅದರಲ್ಲಿ ಪ್ಲಾಸ್ಟಿಕ್ ಬಾಕ್ಸ್ ನಲ್ಲಿಟ್ಟಿದ್ದ 2 ಲಕ್ಷ ರೂ. ನಗದು ಸಹಿತ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ.

ಚಿನ್ನಾಭರಣ ಹಾಗೂ ನಗದು ಸೇರಿ ಒಟ್ಟು 3 ಲಕ್ಷ ಮೌಲ್ಯದ ಸೊತ್ತುಗಳನ್ನು ಕಳ್ಳರು ಕಳವುಗೈದಿದ್ದಾರೆ. ಈ ಬಗ್ಗೆ ಪ್ರೆಸಿಲ್ಲ ಅವರು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article