ಡಿ.8-13 ರಂದು ವಿಮಾನ ಹಾರಾಟ ರದ್ದು
Sunday, December 7, 2025
ಮಂಗಳೂರು: ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೋಗಿ ಬರುವ ಇಂಡಿಗೋ ವಿಮಾನಯಾನ ಸಂಸ್ಥೆಯ ವಿಮಾನಗಳ ಹಾರಾಟವನ್ನು ಡಿ.8 ರಿಂದ 13ರ ವರೆಗೂ ರದ್ದು ಪಡಿಸಲಾಗಿದೆ.
ಈ ಆರು ದಿನಗಳ ಕಾಲ ಒಟ್ಟು 22 ಇಂಡಿಗೋ ವಿಮಾನಗಳ ಸಂಚಾರ ಮಂಗಳೂರು-ಬೆಂಗಳೂರು, ಬೆಂಗಳೂರು-ಮಂಗಳೂರು, ಮಂಗಳೂರು-ಮುಂಬೈ, ಮುಂಬೈ- ಮಂಗಳೂರು ನಡುವೆ ಇರುವುದಿಲ್ಲ ಎಂದು ವಿಮಾನ ನಿಲ್ದಾಣ ಮೂಲಗಳು ತಿಳಿಸಿವೆ.
ಮಂಗಳೂರಿನಿಂದ ಹೊರ ರಾಷ್ಟ್ರಗಳಿಗೆ ಇಂಡಿಗೋ ವಿಮಾನ ಸಂಚಾರ ಇಲ್ಲ. ಕೇವಲ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳು ದೇಶಿಯ ಹಾಗೂ ಅಂತಾರಾಷ್ಟ್ರೀಯ ಸಂಚಾರ ನಡೆಸುತ್ತಿವೆ.
ಕಳೆದ ಮೂರು ದಿನಗಳಿಂದ ಇಂಡಿಗೋ ವಿಮಾನ ಸಂಚಾರ ರದ್ದತಿಯಿಂದಾಗಿ ದೇಶೀಯ ಪ್ರಯಾಣಕ್ಕೆ ತೊಂದರೆ ಉಂಟಾಗಿದೆ. ಮಂಗಳೂರಿನಿಂದ ಮುಂಬೈ, ಬೆಂಗಳೂರು ಮೂಲಕ ಬೇರೆ ಕಡೆಗಳಿಗೆ ಪ್ರಯಾಣಿಸಿದ ಮಂದಿ ಇಂಡಿಗೋ ಮರು ಪ್ರಯಾಣ ರದ್ದತಿಯಿಂದ ಅಲ್ಲೇ ಸಿಕ್ಕಿಹಾಕಿಕೊಂಡ ವಿದ್ಯಮಾನ ನಡೆದಿದೆ.