ಕೇರಳದ ಹೃದಯದಲ್ಲಿ ಅರಳಿದ ಕಮಲ: ಸತೀಶ್ ಕುಂಪಲ
Saturday, December 13, 2025
ಮಂಗಳೂರು: ದೇಶಾದ್ಯಂತ ಬಿಜೆಪಿ ಪರವಾಗಿ ಜನರ ಭರವಸೆ ಉತ್ತುಂಗಕ್ಕೆ ಏರುತಿದೆ ಎನ್ನುವುದಕ್ಕೆ ಚುನಾವಣಾ ಇತಿಹಾಸದಲ್ಲೇ ಕೇರಳದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ರಾಜಧಾನಿ ತಿರುವನಂತಪುರದಲ್ಲಿ ಬಿಜೆಪಿ ಜಯಭೇರಿ ಬಾರಿಸಿ ಕೇರಳದ ಹೃದಯದಲ್ಲಿ ಕಮಲ ಅರಳುವಂತಾಗಿದೆ.
ಇದು ಮುಂದೆ ನಡೆಯಲಿರುವ ಅಸೆಂಬ್ಲಿ ಚುನಾವಣೆಯಲ್ಲಿ ಮಹತ್ವದ ಬದಲಾವಣೆ ಆಗಲಿರುವ ಮುನ್ಸೂಚನೆ ಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷ ಸತೀಶ್ ಕುಂಪಲ ಹರ್ಷ ವ್ಯಕ್ತಪಡಿಸಿದರು.