ಎಕ್ಸ್‌ಪರ್ಟ್‌ನಲ್ಲಿ ವಿಶೇಷ ಉಪನ್ಯಾಸ

ಎಕ್ಸ್‌ಪರ್ಟ್‌ನಲ್ಲಿ ವಿಶೇಷ ಉಪನ್ಯಾಸ


ಮಂಗಳೂರು: ಇಲ್ಲಿನ ಕೋಡಿಯಲ್‌ಬೈಲ್‌ನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳಿಗೆ ವೇದಿಕೆಯಾಯಿತು. 


`Edupath- the journey of success' ಸರಣಿಯಡಿ ಆಯೋಜಿಸಲಾದ Alum talk ಹಾಗೂ ಮಕ್ಕಳ ಹಕ್ಕುಗಳ ಘಟಕ  Right guardians ಉದ್ಘಾಟನೆಯು ಒಂದೇ ವೇದಿಕೆಯಲ್ಲಿ ಜರಗಿತು. 


ಈ ಕಾರ್ಯಕ್ರಮವನ್ನು ಕಾಲೇಜಿನ ಹಳೆ ವಿದ್ಯಾರ್ಥಿ, ಮಂಗಳೂರು ನಗರದ ಡಿಸಿಪಿ (ಲಾ ಆಂಡ್ ಆರ್ಡರ್) ಆಗಿ ಸೇವೆ ಸಲ್ಲಿಸುತ್ತಿರುವ ಮಿಥುನ್ ಹೆಚ್.ಎನ್. ಉದ್ಘಾಟಿಸಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ‘ರೈಟ್ ಗಾರ್ಡಿಯನ್ಸ್’ ಎಂದು ಹೆಸರಿಸಲಾದ ಮಕ್ಕಳ ಹಕ್ಕುಗಳ ಕ್ಲಬ್ ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕುಗಳು, ಜವಾಬ್ದಾರಿ ಮತ್ತು ಹಕ್ಕು ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದನ್ನು ಉದ್ದೇಶಿಸಿದೆ. ಇದೇ ವೇಳೆ ಘೋಷವಾಕ್ಯ ಬರವಣಿಗೆಯ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಲಾಯಿತು.

ಅದೇ ಸಂದರ್ಭದಲ್ಲಿ ‘ಸಿವಿಲ್ ಸೇವೆಯಲ್ಲಿ ಅವಕಾಶಗಳು’ ವಿಷಯದ ಕುರಿತು ಮಾತನಾಡಿದ ಮಿಥುನ್ ಹೆಚ್.ಎನ್. ಅವರು, ಸಿವಿಲ್ ಸರ್ವಿಸ್‌ನಲ್ಲಿರುವ ಅವಕಾಶಗಳು, ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಯ ರಚನೆ, ಅಗತ್ಯ ಶಿಸ್ತು, ಸೇವಾ ಮನೋಭಾವದ ಮಹತ್ವ ಹಾಗೂ ಸಾರ್ವಜನಿಕ ಸೇವೆಗಳ ಮೌಲ್ಯಗಳ ಕುರಿತು ಮಾರ್ಗದರ್ಶನ ನೀಡಿದರು. 

‘ಗುರಿಯ ಸ್ಪಷ್ಟತೆ, ನಿಯಮಿತ ಪರಿಶ್ರಮ ಮತ್ತು ಸಮರ್ಪಣೆ ಇದ್ದರೆ ಸಿವಿಲ್ ಸೇವೆ ದೂರದ ಕನಸಲ್ಲ.’ ಸ್ಪರ್ಧಾತ್ಮಕ ಪರೀಕ್ಷೆಗಳು ಕೇವಲ ಬೌದ್ಧಿಕ ಸಾಮರ್ಥ್ಯದ ಪರೀಕ್ಷೆಯಲ್ಲ, ಬದ್ಧತೆ, ನಿಯಮಿತ ಪರಿಶ್ರಮ ಮತ್ತು ದೇಶಸೇವೆಯ ಪ್ರಾಮಾಣಿಕ ಮನೋಭಾವ ಎಂದರು.

ವಿದ್ಯಾರ್ಥಿಗಳಿಗೆ ಹಲವಾರು ಪ್ರೇರಣಾದಾಯಕ ಉದಾಹರಣೆಗಳನ್ನು ನೀಡಿದ ಅವರು ಸ್ವತಃ ಎಕ್ಸ್‌ಪರ್ಟ್ ಕಾಲೇಜು ತಮ್ಮ ವ್ಯಕ್ತಿತ್ತ್ವ ವಿಕಸನಕ್ಕೆ ನೀಡಿದ ಕೊಡುಗೆಯನ್ನು ನೆನಪಿಸಿಕೊಂಡು ಕುತೂಹಲ, ಸರಿಯಾದ ಗುರಿಯೊಂದಿಗೆ ನಿರಂತರ ಪ್ರಯತ್ನ ಮಾಡುವುದು ಯಶಸ್ಸಿನ ಮೂಲ ಎಂದು ಹೇಳಿದರು.

ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ ತಂತ್ರಜ್ಞಾನ ವಿಭಾಗದ ನಿರ್ದೇಶಕ ಅಂಕುಶ್ ಎನ್ ನಾಯಕ್, ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಮಚಂದ್ರಭಟ್ ಹಾಗೂ ಇನ್ನಿತರ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. 

ಪ್ರಾಂಶುಪಾಲರು ಸಂಪನ್ಮೂಲ ವ್ಯಕ್ತಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಪ್ರಥಮ ಪಿ.ಯು.ಸಿ. ವಿದ್ಯಾರ್ಥಿನಿ ವಂಶಿಕಾ ಅನಂತ ಪದ್ಮನಾಭ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article