ಅಂಬೇಡ್ಕರ್‌ಗೆ ಜಿಲ್ಲಾಡಳಿತದಿಂದ ಗೌರವ

ಅಂಬೇಡ್ಕರ್‌ಗೆ ಜಿಲ್ಲಾಡಳಿತದಿಂದ ಗೌರವ


ಮಂಗಳೂರು: ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾ ಸಾಹೇಬ್  ಡಾ.ಬಿ.ಆರ್ ಅಂಬೇಡ್ಕರ್ ಅವರ 69 ನೇ ಮಹಾ ಪರಿನಿರ್ವಾಣ  ದಿನದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಶನಿವಾರ ಗೌರವ ಸಲ್ಲಿಸಲಾಯಿತು.


ನಗರದ ಪುರಭವನ ಮುಂಭಾಗ ಇರುವ  ಡಾ.ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ  ಜಿಲ್ಲಾಧಿಕಾರಿ ಹೆಚ್.ವಿ ದರ್ಶನ್, ಪೋಲೀಸ್ ಆಯುಕ್ತ  ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರ್ವಾಡೆ ವಿನಾಯಕ ಕಾರ್ಬಾರಿ ಅವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ದೇಶವು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿ ನಿರ್ಮಾಣವಾಗಲು ಡಾ.ಬಿ.ಆರ್ ಅಂಬೇಡ್ಕರ್  ಅವರ ಕೊಡುಗೆ ಅದ್ವಿತೀಯ. ಪ್ರತಿಯೊಬ್ಬ ನಾಗರೀಕರಿಗೂ ಜೀವಿಸಲು ಅಗತ್ಯವಾದ ಸ್ವಾತಂತ್ರ್ಯ ಮತ್ತು ಹಕ್ಕು ಒದಗಿಸಲು ಅವರು ಕಾರಣಕರ್ತರಾಗಿದ್ದಾರೆ. ಅವರ ಚಿಂತನೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿದರೆ ಉತ್ತಮ ನಾಗರಿಕರಾಗಬಹುದು ಎಂದರು. 

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಡಾ.ಬಿ.ಎಸ್ ಹೇಮಲತಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್.ಆರ್ ತಿಮ್ಮಯ್ಯ,  ಜಿಲ್ಲಾ ವಾರ್ತಾಧಿಕಾರಿ  ಬಿ.ಎ ಖಾದರ್ ಶಾ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article