ಐಶ್ವಯ೯ದ ಬೆನ್ನು ಹತ್ತದೆ ಸಂತ್ರಪ್ತದ ಜೀವನಕ್ಕೆ ಒತ್ತು ನೀಡಿ: ಡಾ. ಎಂ. ವೀರಪ್ಪ ಮೊಯಿಲಿ

ಐಶ್ವಯ೯ದ ಬೆನ್ನು ಹತ್ತದೆ ಸಂತ್ರಪ್ತದ ಜೀವನಕ್ಕೆ ಒತ್ತು ನೀಡಿ: ಡಾ. ಎಂ. ವೀರಪ್ಪ ಮೊಯಿಲಿ


ಮೂಡುಬಿದಿರೆ: ಭಾರತ ದೇಶವು ವಿಶ್ವದಲ್ಲೇ ಅತೀ ಹೆಚ್ಚು ಯುವಸಂಪತ್ತು ಮತ್ತು ಜ್ಞಾನಸಂಪತ್ತು ಹೊಂದಿರುವ ದೇಶ. ಭವಿಷ್ಯದಲ್ಲಿ ರಾಷ್ಟ್ರ ನಿರ್ಮಿಸುವ ಇಂದಿನ ಯುವಜನಾಂಗ ಕಲಿಕೆಯ ಹಂತದಲ್ಲೇ ಇಚ್ಛಾಶಕ್ತಿ, ಎದೆಗಾರಿಕೆ, ಪರಿಶ್ರಮ ಪಡಬೇಕು. ಐಶ್ವರ್ಯದ ಬೆನ್ನು ಹತ್ತದೆ ಸಂತೃಪ್ತ ಜೀವನಕ್ಕೆ ಹೆಚ್ಚು ಒತ್ತು ನೀಡಿ ಎಂದು ಎಂದು ಕೇಂದ್ರದ ಮಾಜಿ ಸಚಿವ ಡಾ. ಎಂ. ವೀರಪ್ಪ ಮೊಯಿಲಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಅವರು ಕಲ್ಲಬೆಟ್ಟು ನ್ಯೂ ವೈಬ್ರೆಂಟ್ ಪಿಯು ಕಾಲೇಜಿನಲ್ಲಿ ಶುಕ್ರವಾರ ನಡೆದ ವೈಬ್ರೆಂಟ್ ಡೇ 2025ನ್ನು ಉದ್ಘಾಟಿಸಿ  ಮಾತನಾಡಿದರು.


ನಾವು ಗಳಿಸುವ ಸಂಪತ್ತು ನಮ್ಮ ದೇಶದ ಬೆಳವಣಿಗೆಗೆ ಪೂರಕವಾಗಬೇಕು. ಅದುವೇ ನಿಜವಾದ ದೇಶಭಕ್ತಿ. ಇಲ್ಲಿ ಜ್ಞಾನ ಪಡೆದು ವಿದೇಶದಲ್ಲಿ ಅದು ಸದ್ಭಳಕೆಯಾಗಬಾರದು ಎಂದು ಹೇಳಿದರು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಉದ್ಯಮಿಗಳಾದ ಕೆ. ಶ್ರೀಪತಿ ಭಟ್, ಅಮರೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ವಿಜ್ಞಾನ ಕ್ಷೇತ್ರದಲ್ಲಿ ಮಹೋನ್ನತ ಸಾಧನೆಗೈದ ಎನ್‌ಐಟಿಕೆಯ ಪ್ರಾಧ್ಯಾಪಕ ಡಾ. ಎಂ. ಎನ್. ಸತ್ಯನಾರಾಯಣ ಅವರಿಗೆ ‘ವೈಬ್ರೆಂಟ್ ವಿಜ್ಞಾನ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಟ್ರಸ್ಟಿ ಶೇಕ್ ಮೆಹಬೂಬ್ ಭಾಷಾ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿ, ಪ್ರಾಂಶುಪಾಲ ಡಾ. ಎಸ್. ಎಸ್. ವೆಂಕಟೇಶ ನಾಯಕ್ ಶೈಕ್ಷಣಿಕ ಸಾಧನೆಗಳ ಕುರಿತು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಟ್ರಸ್ಟಿಗಳಾದ ಚಂದ್ರರಾಜೇ ಅರಸ್, ಯೋಗೀಶ್ ಬೆಡೇಕರ್, ಸುಭಾಷ್ ಕೆ. ಝಾ, ಡಾ. ಶರತ್ ಗೋರೆ ಉಪಸ್ಥಿತರಿದ್ದರು.

ಆಡಳಿತಾಧಿಕಾರಿ ಅರುಣ್ ಡಿಸಿಲ್ವ ಸ್ವಾಗತಿಸಿದರು. ಉಪಪ್ರಾಂಶುಪಾಲೆ ಡಾ. ರಶ್ಮಿ ಅರಸ್ ವಂದಿಸಿದರು. ಉಪನ್ಯಾಸಕ ನಿಕೇತ್ ಮೋಹನದಾಸ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. 

ನಂತರ ವಿದ್ಯಾಥಿ೯ಗಳಿಂದ ಸಾಂಸ್ಕೃತಿಕ ಕಾಯ೯ಕ್ರಮಗಳು ನಡೆದವು. 

ಸಭಾ ಕಾಯ೯ಕ್ರಮದ ಮೊದಲು 150 ವಿದ್ಯಾಥಿ೯ಗಳು "ವಂದೇ ಮಾತರಂ"ಗೀತೆ ಹಾಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article