ದರೆಗುಡ್ಡೆಯಲ್ಲಿ ಪೇಪರ್ ಬ್ಯಾಗ್, ಬಟ್ಟೆ ಬ್ಯಾಗ್ ತರಬೇತಿ ಶಿಬಿರ ಸಮಾರೋಪ
Sunday, December 28, 2025
ಮೂಡುಬಿದಿರೆ: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ಸೋಮನಾಥೇಶ್ವರ ಸಂಜೀವಿನಿ ಗ್ರಾ.ಪಂ. ಮಟ್ಟದ ಒಕ್ಕೂಟ ಧರೆಗುಡ್ಡೆ ಇವರ ಜಂಟಿ ಆಶ್ರಯದಲ್ಲಿ ನಡೆದ ಪೇಪರ್ ಬ್ಯಾಗ್ ಮತ್ತು ಬಟ್ಟೆ ಬ್ಯಾಗ್ ತಯಾರಿಕೆಯ ತರಬೇತಿ ಕಾರ್ಯಕ್ರಮ ಪಂಚಾಯಿತಿ ಸಭಾಭವನದಲ್ಲಿ ಸಮಾಪನಗೊಂಡಿತು.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ರಾಜ್ ಮಾತನಾಡಿ, ತರಬೇತಿ ಪಡೆದ ಮಹಿಳೆಯರು ಕೇವಲ ಕಲಿಕೆಗೆ ಸೀಮಿತವಾಗದೆ, ಸ್ವ-ಉದ್ಯೋಗ ಕೈಗೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು. ಹೊಸ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಲು ನಿರಂತರ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.
ಒಕ್ಕೂಟದ ಅಧ್ಯಕ್ಷೆ ಜಯಲಕ್ಷಿ?ಮ, ಪಿಡಿಒ ರಾಜು, ತರಬೇತುದಾರೆ ಶುಭಲಕ್ಷ್ಮೀ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಾದ ಪ್ರತಿಮಾ, ಚಂದ್ರಿಕಾ ಮತ್ತು ತುಳಸಿ ಅನಿಸಿಕೆ ವ್ಯಕ್ತಪಡಿಸಿದರು. ಎಂಬಿಕೆ ಮಾನಸ ಜೈನ್ ನಿರೂಪಿಸಿದರು. ಸುರಕ್ಷಾ ಸ್ವಾಗತಿಸಿ, ಸುಕನ್ಯಾ ವಂದಿಸಿದರು.