ಡಿಜಿಟಲ್ ಅರೆಸ್ಟ್ ಗೊಳಗಾದರೆ ತಕ್ಷಣ ಪೊಲೀಸರಿಗೆ ದೂರು ನೀಡಿ: ಪಿಎಸ್‍ಐ ಪ್ರತಿಭಾ

ಡಿಜಿಟಲ್ ಅರೆಸ್ಟ್ ಗೊಳಗಾದರೆ ತಕ್ಷಣ ಪೊಲೀಸರಿಗೆ ದೂರು ನೀಡಿ: ಪಿಎಸ್‍ಐ ಪ್ರತಿಭಾ


ಮೂಡುಬಿದಿರೆ: ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ವಂಚನೆಯ ಜಾಲ ಸಕ್ರಿಯವಾಗಿದೆ. ಇಂತಹವರ ಬಗ್ಗೆ ಸಾರ್ವಜನಿಕರು ಧೈರ್ಯದಿಂದ ಮುಂದೆ ಬಂದು ಪೊಲೀಸರಿಗೆ ದೂರು ನೀಡಬೇಕು ಎಂದು ಮೂಡುಬಿದಿರೆ ಪೊಲೀಸ್ ಠಾಣೆಯ ಉಪ ನಿರೀಕ್ಷಕಿ ಪ್ರತಿಭಾ ಕೆ.ಸಿ. ಹೇಳಿದರು. 

ಅವರು ಮಂಗಳವಾರ ಬನ್ನಡ್ಕ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಪ್ರಜಾವಾಣಿ ಸಹಯೋಗದಲ್ಲಿ ನಡೆದ `ಅಪರಾಧ ತಡೆ ಜಾಗೃತಿ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.  ಅಪರಿಚಿತರ ಒಟಿಪಿಗಳಿಗೆ, ಅನುಮಾನಾಸ್ಪದ ಮೆಸ್ಸೇಜ್ ಲಿಂಕ್‍ಗಳಿಗೆ ಪ್ರತಿಕ್ರಿಯಿಸಬೇಡಿ ಮೊಬೈಲ್‍ಗೆ ಬರುವ ಮನಿ ಲೋನ್ ಆಪ್‍ಗಳಿಂದ ಸಾಲ ಪಡೆಯುವುದು ಕೂಡ ಅಪಾಯವೇ. ಷೇರು ಮಾರುಕಟ್ಟೆಗೆ ಹಣಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ, ವರ್ಕ್ ಫ್ರಂ ಹೋಮ್‍ನಿಂದ ಮನೆಯಲ್ಲಿದ್ದುಕೊಂಡೆ ಸಂಪಾದನೆ ಮಾಡುವುದು ಇವೆಲ್ಲಾ ಆನ್ಲೈನ್ ಮೋಸದ ಬೇರೆ ಬೇರೆ ಮಾರ್ಗಗಳು. ಈ ಬಗ್ಗೆ ವಿದ್ಯಾರ್ಥಿಗಳು, ಸಾರ್ವಜನಿಕರು ಎಚ್ಚರದಿಂದರಬೇಕು. ಇಂತಹ ಮೋಸದ ಸಂದೇಶಗಳು ನಿಮ್ಮ ಮೊಬೈಲ್‍ಗೆ ಬಂದರೆ ನಿಮ್ಮ ಹೆತ್ತವರಿಗೆ, ಸ್ನೇಹಿತರಿಗೆ ತಿಳಿಸಿ ಅವರನ್ನು ಜಾಗೃತಗೊಳಿಸಿ ಎಂದರು. 

ವಿದ್ಯಾರ್ಥಿಗಳ ಬದುಕು ಹಾಳು ಮಾಡುವ ಡ್ರಗ್ಸ್, ಗಾಂಜಾ ಇನ್ನಿತರ ಮಾದಕ ವಸ್ತುಗಳ ಸೇವನೆಯಿಂದ ದೂರ ಇರಬೇಕು. ಇಂತಹ ಪ್ರಕರಣಗಳಲ್ಲಿ ಸಿಕ್ಕಿಬಿದ್ದರೆ ನಿಮ್ಮ ವಿರುದ್ಧವು ಪ್ರಕರಣ ದಾಖಲಾಗುತ್ತದೆ. ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಮಾರಾಟ ಮಾಡುವವರ ಬಗ್ಗೆ ಮಾಹಿತಿ ಇದ್ದರೆ ಪೊಲೀಸ್‍ಠಾಣೆಗೆ ಮಾಹಿತಿ ನೀಡಿ. ನಿಮ್ಮ ಹೆಸರನ್ನು ಗೌಪ್ಯವಾಗಿರಿಸಿಕೊಳ್ಳಲಾಗುವುದು ನಂತರ ಫೊಕ್ಸೊ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು. 

ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದ ಪತ್ರಿಕಾ ವಿತರಕರು, ಹಾಗೂ ಬನ್ನಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ  ದಯಾನಂದ ಪೈ  ಡ್ರಗ್ಸ್, ಗಾಂಜಾ ಮಾರಾಟಗಾರರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.

ಪ್ರಜಾವಾಣಿ ಪತ್ರಿಕೆಯ ಮಂಗಳೂರು ವರದಿಗಾರ ಪ್ರವೀಣ್ ಪಾಡಿಗಾರ್, ಕಾಲೇಜಿನ ಕ್ರೀಡಾ ಕಾರ್ಯದರ್ಶಿ ಸಂಗೀತಾ, ಎನ್.ಎಸ್.ಎಸ್ ಕಾರ್ಯದರ್ಶಿಗಳಾದ ದೀಪ್ತಿ ಸುರೇಶ್ ಪೂಜಾರಿ ಮತ್ತು ರಾಜೇಶ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸುಕನ್ಯಾ ನಿರೂಪಿಸಿದರು. ಪತ್ರಕರ್ತ ಪ್ರಸನ್ನ ಹೆಗ್ಡೆ ಸ್ವಾಗತಿಸಿದರು.  ಉಪನ್ಯಾಸಕಿ ಆಶಾ ಶಾಲೆಟ್ ಡಿಸೋಜಾ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article