ಹೋಟೆಲ್ ಮ್ಯಾನೇಜರ್‌ನಿಂದ ಲಕ್ಷಾಂತರ ರೂ. ವಂಚನೆ
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಸಮೀಪದ ಏನಕ್ಕಲ್‌ನಲ್ಲಿ ಇರುವ ದಿ. ರಾಯಲ್ ಮೋಂಟಾನಾ ಹೋಟೆಲ್ ಆಂಡ್ ರೆಸಾರ್ಟ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪ್ರೇಮ್ ಚಂದ್ ಸಿ. ಅವರು ಹೋಟೇಲ್ ಮತ್ತು ರೆಸಾರ್ಟ್ ವ್ಯವಹಾರವನ್ನು ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೋಟೆಲ್ ಮಾಲಕರು ನೀಡಿರುತ್ತಾರೆ.
ಈ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಹೋಟೆಲ್ ರೂಂ ಅನ್ನು ಬುಕ್ ಮಾಡುವ ಗ್ರಾಹಕರಿಂದ ಆರೋಪಿತನಾದ ಪ್ರೇಮ್ ಚಂದ್ ಸಿ. ಎಂಬಾತನು ತನ್ನ ವಯಕ್ತಿಕ UPID ಅನ್ನು ನೀಡಿ ಗ್ರಾಹಕರಿಂದ ಹಣವನ್ನು ಪಡೆದು ಕಂಪನಿಗೆ ಮೋಸ ಮಾಡಿರುತ್ತಾನೆ. ಹಾಗೂ ಗ್ರಾಹಕರು ರೂಂ ಅನ್ನು ಬುಕ್ ಮಾಡಲು ಬಂದಂತಹ ಸಂದರ್ಭದಲ್ಲಿ ಹೋಟೇಲ್‌ನ್ನು ರಿಸೆಪ್ಷನ್‌ನಲ್ಲಿ ತನ್ನದೇ UPID ಹೊಂದಿರುವ ಸ್ಕ್ಯಾನರ್‌ನ್ನು ತೋರಿಸಿ ತನ್ನದೇ ಆದ UPID ಸ್ಕ್ಯಾನರ್‌ಗೆ ಗ್ರಾಹಕರಿಂದ ಹಣವನ್ನು ಪಡೆದಿರುತ್ತಾನೆ. ಮತ್ತು ಗ್ರಾಹಕರಿಂದ UPID ಮೂಲಕ ಹಣ ವರ್ಗಾವಣೆಯಾಗದೇ ಇದ್ದಾಗ ಅವರಿಂದ ನಗದು ರೂಪದಲ್ಲಿ ಹಣವನ್ನು ಪಡೆದು ಆ ಹಣವನ್ನು ಕಂಪನಿಯ ಖಾತೆಗೆ ಜಮಾ ಮಾಡದೇ ತಾನೆ ಹಣವನ್ನು ವಯಕ್ತಿಕ ವಿಚಾರಗಳಿಗೆ ಬಳಸಿಕೊಂಡಿದ್ದಾನೆ.
ಆತನು ಕೆಲಸಕ್ಕೆ ಸೇರಿದ ದಿನದಿಂದ ಇಲ್ಲಿಯ ತನಕ ಎಲ್ಲಾ ರೀತಿಯ ಹಣದ ವ್ಯವಹಾರವನ್ನು ಇಲ್ಲಿನ ಸಹೋದ್ಯೋಗಿಗಳ ಜೊತೆ ಸೇರಿಕೊಂಡು ಹೋಟೆಲ್ (ಕಂಪನಿಗೆ) ಸುಮಾರು 47,67,166 ರೂ.ಗಳಷ್ಟು ಹಣವನ್ನು ಪಡೆದು ವಂಚಿಸಿರುತ್ತಾನೆ ಎಂದು ಸುಬ್ರಹ್ಮಣ್ಯ ಪೊಲೀಸ್ ಸ್ಟೇಷನ್‌ಗೆ ದೂರು ನೀಡಲಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ. ಠಾಣಾ ಅ.ಕ್ರ:62/2025. ಕಲಂ:318(3), 316(5) R/W 3(5) BNS ಯಂತೆ ಪ್ರಕರಣ ದಾಖಲಾಗಿದೆ.