ಸುಳ್ಯ ಶಾಸಕಿಯ ತೇಜೋವಧೆ: ಅದಿದ್ರಾವಿಡ ಸಮುದಾಯದಿಂದ ದೂರು ದಾಖಲು

ಸುಳ್ಯ ಶಾಸಕಿಯ ತೇಜೋವಧೆ: ಅದಿದ್ರಾವಿಡ ಸಮುದಾಯದಿಂದ ದೂರು ದಾಖಲು


ಬಂಟ್ವಾಳ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ‘ಭಾವಪೂರ್ಣ ಶೃದ್ದಾಂಜಲಿ’ ಎಂದು ಅವಹೇಳನಕಾರಿಯಾಗಿ ಬರೆದು ಹರಿಯಬಿಟ್ಟ ದುಷ್ಕರ್ಮಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅದಿದ್ರಾವಿಡ ಸಮಾಜ ಸೇವಾ ಸಹಕಾರಿ ಸಂಘದ ಬಂಟ್ವಾಳ ತಾಲೂಕು ಘಟಕ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಿಸಿದೆ.

‘ಬಿಲ್ಲವ ಸಂದೇಶ’ ಎಂಬ ಪೇಸ್‌ಬುಕ್ ಪೇಜ್‌ನಲ್ಲಿ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಸುಲ್ತಾನ್ ಕಟ್ಟೆ ನಿವಾಸಿ ಸಂದೇಶ್ ಯಾನೆ ಸೀತಾರಾಮ ಎಂಬಾತ ನಮ್ಮ ಸಮುದಾಯದ ನಾಯಕಿ, ಸುಳ್ಯ ಶಾಸಕಿಯಾಗಿರುವ ಭಾಗೀರಥಿ ಮುರುಳ್ಯ ಅವರನ್ನು ತೇಜೋವಧೆಗೊಳಿಸುವ ಮೂಲಕ ಅವರ ಘನತೆ, ವ್ಯಕ್ತತ್ವಕ್ಕೆ ಧಕ್ಕೆ ತಂದಿದ್ದು, ಅತನ ವಿರುದ್ಧ ಕಾನೂನು ರೀತಿಯ ಕ್ರಮಕೈಗೊಂಡು ತಕ್ಷಣ ಬಂಧಿಸುವಂತೆ ಸಂಘದ ಅಧ್ಯಕ್ಷ ವಿಶ್ವನಾಥ ಚಂಡ್ತಿಮಾರ್ ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಭಾಗೀರಥಿ ಮುರುಳ್ಯ ಅವರು ಶಾಸಕರಾದ ಬಳಿಕ ಕ್ಷೇತ್ರದಲ್ಲಿ ಉತ್ತಮ ಕೆಲಸ, ಕಾರ್ಯಗಳನ್ನು ಮಾಡುತ್ತಿದ್ದು, ಅವರ ಜನಪ್ರಿಯತೆಯನ್ನು ಸಹಿಸದ ದುಷ್ಕರ್ಮಿ ಅವರ ಬಗ್ಗೆ ಅತ್ಯಂತ ಕೀಳು ಪದವನ್ನು ಬಳಸಿ ತೇಜೋವಧೆ ಗೈದಿರವುದನ್ನು ನಮ್ಮ ಸಮುದಾಯ ಸಹಿಸಲು ಸಾಧ್ಯವಿಲ್ಲ ಅತನ ಮೇಲೆ ಜಾತಿನಿಂದನೆ ಕೇಸು ಕೂಡ ದಾಖಲಿಸುವಂತೆ ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಈ ಬಗ್ಗೆ ದೂರು ಸ್ವೀಕರಿಸಿರುವ ನಗರ ಠಾಣೆಯ ಇನ್ಸ್‌ಪೆಕ್ಟರ್ ಸೂಕ್ತ ಕ್ರಮಕೈಗೊಳ್ಳುವ ಭರವಸೆಯಿತ್ತಿದ್ದಾರೆ. 

ಈ ಸಂದರ್ಭದಲ್ಲಿ ಶೀನ, ದೇವದಾಸ್, ಗಣೇಶ್ ಮತ್ತಿತರರು ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article