ಗಡಿ ಭದ್ರತಾ ಪಡೆಗೆ ಆಯ್ಕೆಯಾದ ನಿಶ್ಮಿತಾಗೆ ಕರಿಯಂಗಳಗೆ ಗ್ರಾ.ಪಂ.ನಿಂದ ಅಭಿನಂದನೆ
Thursday, January 8, 2026
ಬಂಟ್ವಾಳ: ತಾಲೂಕಿನ ಕರಿಯಂಗಳ ಗ್ರಾಮ ಪಂಚಾಯತ್ನಲ್ಲಿ ಮಹಿಳಾ ಹಾಗೂ ಮಕ್ಕಳ ಹಕ್ಕು ಗ್ರಾಮಸಭೆ ಪಂಚಾಯತ್ ಸಭಾಂಗಣದಲ್ಲಿ ನಡೆದಿದ್ದು, ಈ ಸಂದರ್ಭದಲ್ಲಿ ಇದೇ ಗ್ರಾಮದಿಂದ ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾದ ನಿಶ್ಮಿತಾ ಅವರನ್ನು ಪಂಚಾಯತ್ ವತಿಯಿಂದ ಅಭಿನಂದಿಸಲಾಯಿತು.
ಈಕೆ ಕರಿಯಂಗಳ ಗ್ರಾಮದ ಜೇರ್ಲಗುಡ್ಡೆ ನಿವಾಸಿ ಕೂಸ ಬಂಗೇರ ಹಾಗೂ ಪ್ರೇಮ ದಂಪತಿಯ ಪುತ್ರಿಯಾಗಿದ್ದು, ನಿಶ್ಮಿತಾ ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾಗಿರುವುದು ಇಡೀ ಗ್ರಾಮಕ್ಕೆ ಸಂದ ಗೌರವವಾಗಿದೆ ಎಂದು ಗ್ರಾ.ಪಂ. ಅಧ್ಯಕ್ಷೆ ರಾಧಾ ಲೋಕೇಶ್ ಹೇಳಿದರು.
ಉಪಾಧ್ಯಕ್ಷ ರಾಜು ಕೋಟ್ಯಾನ್, ಪಿಡಿಒ ವಸಂತಿ, ಮಾಜಿ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ಪಂ. ಸದಸ್ಯರು, ಸಿಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.