ಜ.30 ರಿಂದ ಅಗ್ನಿವೀರ್ ನೇಮಕಾತಿ ರ‍್ಯಾಲಿ
ಮಂಗಳೂರು: ಮಂಗಳೂರಿನ ಸೇನಾ ನೇಮಕಾತಿ ಕಚೇರಿಯಿಂದ ಜನವರಿ 30 ರಿಂದ ಫೆಬ್ರವರಿ 10 ರವರೆಗೆ ಮೂಡಬಿದ್ರಿ ಸ್ವರಾಜ್ ಮೈದಾನದಲ್ಲಿ ಅಗ್ನಿವೀರ್ ನೇಮಕಾತಿ ರ‍್ಯಾಲಿ ನಡೆಯಲಿದೆ.
ರಾಜ್ಯದ 11 ಜಿಲ್ಲೆಗಳಿಂದ ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಸೇರಿದಂತೆ ಕಿರುಪಟ್ಟಿ ಮಾಡಿದ ಅಭ್ಯರ್ಥಿಗಳಿಗಾಗಿ 1 ಅಗ್ನಿವೀರ್ ನೇಮಕಾತಿ ರ‍್ಯಾಲಿಯನ್ನು ಜನವರಿ 30 ರಿಂದ ಫೆಬ್ರವರಿ 10 ರವರೆಗೆ ಮೂಡಬಿದ್ರಿಯ ಸ್ವರಾಜ್ ಮೈದಾನದಲ್ಲಿ ನಡೆಸಲು ನಿರ್ಧರಿಸಲಾಗಿದೆ. 30 ಜೂನ್ 2025 ರಿಂದ 10 ಜುಲೈ 2025 ರವರೆಗೆ ನಡೆಸಲಾದ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಅಇಇ) ಅರ್ಹತೆ ಪಡೆದ ಅಗ್ನಿವೀರ್ ಅರ್ಜಿದಾರರನ್ನು ರ‍್ಯಾಲಿಗೆ ಆಹ್ವಾನಿಸಲಾಗಿದೆ.
ಸೇನೆಯಲ್ಲಿ ಎಲ್ಲಾ ವರ್ಗಗಳ ದಾಖಲಾತಿಗಾಗಿ ರ‍್ಯಾಲಿಯನ್ನು ಆಯೋಜಿಸಲಾಗಿದೆ. ಸೇನಾ ನೇಮಕಾತಿ ಕಚೇರಿ ಪ್ರಕಟಿಸಿದ ರ್ಯಾಲಿ ಅಧಿಸೂಚನೆ ಪ್ರಕಾರ ಸೇನೆಯ ವಿಭಾಗಗಳ ಪ್ರಕಾರ ವಯಸ್ಸು, ಶಿಕ್ಷಣ ಅರ್ಹತೆ ಮತ್ತು ನೋಂದಣಿಗೆ ಇತರ ಮಾನದಂಡಗಳ ವಿವರಗಳನ್ನು ನಿರ್ದಿಷ್ಟಪಡಿಸಲಾಗಿದೆ.
ವೆಬ್ssಸೈಟ್: mwww.joinindianarmy.nic.in ನಲ್ಲಿ ಪ್ರಕಟವಾದ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶದ ಮೇಲೆ ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಪ್ರವೇಶ ಕಾರ್ಡ್ಗಳನ್ನು ನೀಡಲಾಗಿದೆ. ಅವರ ವೈಯಕ್ತಿಕ ಖಾತೆ ಮತ್ತು ನೋಂದಾಯಿತ ಇಮೇಲ್ ಐಡಿಯನ್ನು ಲಾಗಿನ್ ಮಾಡುವ ಮೂಲಕ ಪ್ರವೇಶಿಸಬಹುದಾದ ಭಾರತೀಯ ಸೇನೆಯ ವೆಬ್‌ಸೈಟ್‌ನಲ್ಲಿಯೂ ಸಹ ಇದು ಲಭ್ಯವಿದೆ. ಆಯ್ಕೆಯು ಆನ್‌ಲೈನ್ ಸಿಇಇ ಸಮಯದಲ್ಲಿ ಅಭ್ಯರ್ಥಿಗಳ ಕಾರ್ಯಕ್ಷಮತೆ, ನೇಮಕಾತಿ ರ್ಯಾಲಿಯಲ್ಲಿ ನಡೆಸುವ ಪರೀಕ್ಷೆಗಳು ಮತ್ತು ಅಂತಿಮ ಅರ್ಹತೆಯ ಮೇಲೆ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.