ಕಾನೂನು ಅರಿವು ಕಾರ್ಯಕ್ರಮ

ಕಾನೂನು ಅರಿವು ಕಾರ್ಯಕ್ರಮ


ಮಂಗಳೂರು: ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಮಂಗಳೂರು ಇವರ ಸಹಯೋಗದಲ್ಲಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿಗಳಿಗೆ ಜ.28 ರಂದು ಕಾನೂನು ಅರಿವು ಕಾರ್ಯಕ್ರಮ ನಡೆಯಿತು.

ಸಂಪನ್ಮೂಲ ವ್ಯಕ್ತಿ ಎರಿಕ್ ಡಿ’ಕುನ್ಹಾ ಅವರು ಮಾತನಾಡಿ, ಅರಣ್ಯ ನಾಶ, ಆಹಾರ ಮತ್ತು ರಸ್ತೆಗಳ ನಿರ್ಮಾಣ, ಅಕ್ರಮ ವಸತಿ ಹಾಗೂ ಅಭಿವೃದ್ಧಿ ಕಾರ್ಯಗಳು ವನ್ಯಜೀವಿಗಳ ಸ್ವಾಭಾವಿಕ ವಾಸಸ್ಥಾನವನ್ನು ಕುಗ್ಗಿಸುತ್ತಿದೆ. ಅರಣ್ಯ ಅವಲಂಬಿತ ಬುಡಕಟ್ಟು ಸಮುದಾಯಗಳು ಈ ಮಾನವ-ಪ್ರಾಣಿ ಸಂಘರ್ಷದಿಂದ ಹೆಚ್ಚು ತೊಂದರೆ ಅನುಭವಿಸುತ್ತಿವೆ. ಹಾವು ಕಡಿತ, ಕಾಡಾನೆಗಳ ಹಾವಳಿಗಳಿಂದಾಗಿ ರೈತರ ಬೆಳೆ ನಾಶ ಆಗುತ್ತಿದೆ. ಪ್ಲಾಸ್ಟಿಕ್ ಕಸದ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಪ್ರಾಣಿ ಸಂಕುಲವು ಅಪಾರ ತೊಂದರೆಗಳನ್ನು ಅನುಭವಿಸುತ್ತವೆ. ಇವೆಲ್ಲದರ ರಕ್ಷಣೆ ಮತ್ತು ನಿಯಂತ್ರಣ ಎಲ್ಲರ ಜವಾಬ್ದಾರಿ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮಾನಸ ಹೆಗಡೆ ಮಾತನಾಡಿ, ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು. ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಮನವರಿಕೆ ಮಾಡಿ ಮಹಿಳೆಯರ ಲೈಂಗಿಕ ದೌಜನ್ಯ ತಡೆ ಸಮಿತಿಯನ್ನು ರಚನೆ ಮಾಡುವುದರ ಕುರಿತು ಗಮನಹರಿಸಿದರು. ಲೈಂಗಿಕ ದೌಜನ್ಯಗಳ ಘಟನೆಗಳು ಸಂಭವಿಸಿದಲ್ಲಿ ಸಮಿತಿಗಳಿಗೆ ಮಾಹಿತಿಯನ್ನು ನೀಡಿ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದರು.

ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಅರುಣ್ ಕುಮಾರ್ ಶೆಟ್ಟಿ ಎನ್. ಅವರು ಲೈಂಗಿಕ ದೌಜನ್ಯಗಳ ತಡೆ ಸಮಿತಿ ರಚನೆ ಮಾಡಿರುತ್ತೇವೆ. ಪ್ರತೀ ತಿಂಗಳು ದೂರುಗಳು ಬಂದಲ್ಲಿ, ಪರಿಶೀಲನೆ ಮಾಡಿ ಕ್ರಮಕೈಗೊಳ್ಳುತ್ತೇವೆ. ಕಾನೂನು ಪ್ರಾಧಿಕಾರದ ಅಗತ್ಯ ಸೇವೆಗಳನ್ನು ಅವಶ್ಯವಿದ್ದಲ್ಲಿ ಪಡೆಯುತ್ತೇವೆ ಎಂದರು.

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ.ವಿ. ರಾವ್ ಉಪಸ್ಥಿತರಿದ್ದರು. ಸಂಸ್ಕೃತಿ ಗ್ರಾಮ, ಮೃಗಾಲಯ, ಲೇಕ್ ಗಾರ್ಡನ್ ಮತ್ತು ವಿಜ್ಞಾನಕೇಂದ್ರದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕ್ಯುರೇಟರ್ ಜಗನ್ನಾಥ್ ಕಾರ್ಯಕ್ರಮ ನಿರೂಪಿಸಿ, ವಂದಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article