ದಿವಂಗತ ನಿಟ್ಟೆ ವಿನಯ ಹೆಗ್ಡೆ ಅವರಿಗೆ ಬಿಜೆಪಿ ದ.ಕ. ಜಿಲ್ಲೆ ವತಿಯಿಂದ ಶ್ರದ್ಧಾಂಜಲಿ
ಈ ಶೃದ್ದಾಂಜಲಿ ಸಭೆಯಲ್ಲಿ ಶಿಕ್ಷಣ ಮತು ಸಮಾಜ ಸೇವೆ ಕ್ಷೇತ್ರದಲ್ಲಿ ಅನನ್ಯ ಕೊಡುಗೆ ನೀಡಿದ ನಿಟ್ಟೆ ಎನ್. ವಿನಯ ಹೆಗ್ಡೆ ಅವರ ನಿಧನವು ರಾಜ್ಯಕ್ಕೆ ಮಾತ್ರವಲ್ಲದೇ ಸಮಸ್ತ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ, ಗ್ರಾಮಗಳನ್ನು ಶಿಕ್ಷಣ ಕೇಂದ್ರಗಳಾಗಿ ರೂಪಿಸುವ ದೂರದೃಷ್ಟಿಯನ್ನು ಹೊಂದಿದ್ದ ಅವರು ಯುವಜನತೆಗೆ ಶಕ್ತಿಯುತ ಹಾಗೂ ಭದ್ರ ಭವಿಷ್ಯವನ್ನು ನಿರ್ಮಿಸಿಕೊಟ್ಟ ಮಹಾನ್ ದೃಷ್ಟಿವಂತರಾಗಿದ್ದರು ಎಂದು ಅವರ ಆತ್ಮೀಯರು ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣೀಕ್ ಸ್ಮರಿಸಿದರು.
ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಅಸಾಧಾರಣ ವ್ಯಕ್ತಿತ್ವವನ್ನು ಹೊಂದಿದ್ದ ಹಾಗೂ ಪರೋಪಕಾರಕ್ಕೆ ಸದಾ ಸ್ಪಂದಿಸುತ್ತಿದ್ದ ನಿಟ್ಟೆ ವಿನಯ್ ಹೆಗ್ಡೆ ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾಧಿಸಿದರು. ಜೊತೆಗೆ ದುಃಖತಪ್ತ್ಪ ಕುಟುಂಬ ಸದಸ್ಯರಿಗೆ ಹಾಗೂ ಅಪಾರ ಬಂದುಬಳಗಕ್ಕೆ ಈ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಹೇಳಿದರು.
ಶಾಸಕ ಡಿ. ವೇದವ್ಯಾಸ್ ಕಾಮತ್, ಮಾಜಿ ಶಾಸಕ ಕೆ. ಮೋನಪ್ಪ ಭಂಡಾರಿ ನುಡಿನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ವಿ.ಪ. ಸದಸ್ಯ ಕಿಶೋರ್ ಕುಮಾರ್ ಪಿ., ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಬಾಲಕೃಷ್ಣ ಭಟ್, ಪ್ರಮುಖರಾದ ಆರ್.ಸಿ. ನಾರಾಯಣ, ದೇವಪ್ಪ ಪೂಜಾರಿ, ರಮೇಶ್ ಕಂಡೆಟ್ಟು, ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ನಂದನ್ ಮಲ್ಯ, ಡಾ. ಮಂಜುಳಾ ಅನಿಲ್ ರಾವ್, ವಸಂತ ಪೂಜಾರಿ, ಜಿತೇಂದ್ರ ತಲಪಾಡಿ, ಜಿಲ್ಲಾ ಪದಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.
