ಜ.24 ರಂದು ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯಿಂದ 'ವಿವೇಕ ಕಾಯಕ ರತ್ನ' ಪ್ರಶಸ್ತಿ ಪ್ರದಾನ
ಮೂಡುಬಿದಿರೆ: ಸ್ವಾಮಿ ವಿವೇಕಾನಂದರ 163ನೇ ಜಯಂತ್ಯೋತ್ಸವ ಅಂಗವಾಗಿ ಕಿನ್ನಿಗೋಳಿಯ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ವತಿಯಿಂದ ಜ.24 ರಂದು ಸಂಜೆ 6.00ಗಂಟೆಗೆ ಅಳಿಯೂರಿನ ಶನೈಶ್ಚರ ದೇವಸ್ಥಾನದ ಮುಂಭಾಗದ ವಿಕಾಸನಗರದಲ್ಲಿ ವಿವೇಕ ಕಾಯಕ ರತ್ನ ಪ್ರಶಸ್ತಿ ಪ್ರದಾನ ಹಾಗೂ ಭಕ್ತಿ ಪ್ರಧಾನ ನಾಟಕ ನಡೆಯಲಿದೆ.
ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ. ಜಗನ್ನಾಥ ಶೆಟ್ಟಿ ನಿಡ್ಡೋಡಿ ಚಾವಡಿಮನೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾಯ೯ಕ್ರಮವನ್ನು ಆಳ್ವಾಸ್ ಎಜುಕೇಶನ್ ಫೌಂಡೇಶನ್ನ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಉದ್ಘಾಟಿಸಲಿದ್ದಾರೆ. ಕರಿಂಜೆ ಶ್ರೀ ಜಗದ್ಗುರು ರಾಘವೇಂದ್ರ ಪೀಠದ ಶ್ರೀ ಮುಕ್ತಾನಂದ ಶ್ರೀ ಗಳವರು ಆಶೀರ್ವಚನ ನೀಡಲಿದ್ದಾರೆ.
ಪ್ರಶಸ್ತಿ ಪ್ರದಾನ : ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸದಾನಂದ ಪೂಜಾರಿ (ಹೈನುಗಾರಿಕೆ), ಅಚ್ಯುತ ಆಚಾರ್ಯ (ರಂಗಭೂಮಿ), ರವೀಂದ್ರ ಅಮೀನ್ (ಚಿತ್ರಕಲೆ), ಆನಂದ ಸೀತಾರಾಮ ಶೆಟ್ಟಿ (ಕಂಬಳ), ಸಂತೋಷ್ ಆಚಾರ್ಯ (ಶಿಲ್ಪಕಲೆ), ಲೀಲಾ ಮಡಿವಾಳಿ (ಡೋಬಿ), ವಸಂತಿ ಶೆಟ್ಟಿ (ಅಂಗನವಾಡಿ), ಚಂದ್ರಾವತಿ ಪೂಜಾರಿ (ನಾಟಿ ವೈದ್ಯೆ), ಸುಮನ ನೆಲ್ಲಿಕಾರು (ಹೊಟೇಲ್ ಉದ್ಯಮ), ನಾರಾಯಣ ಮಡಿವಾಳ (ಚಾಲಕ), ಮುರಳೀಧರ ಸುವರ್ಣ (ಕ್ಷೌಲಕ ವೃತ್ತಿ) ಹಾಗೂ ದಿನೇಶ್ ದೇವಾಡಿಗ (ನಾದಸ್ವರ) ಅವರಿಗೆ 'ವಿವೇಕ ಕಾಯಕ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ರುಕ್ಕಯ ಪೂಜಾರಿ ಅವರಿಗೆ ವಿಶೇಷ ಅಭಿನಂದನೆ ಹಾಗೂ ಪರಶುರಾಮ ಸೇವಾ ಟ್ರಸ್ಟ್ ಮತ್ತು ಪ್ರತಿಭಾ ಮಹಿಳಾ ಸ್ವಸಹಾಯ ಸಂಘಕ್ಕೆ ಅತ್ಯುತ್ತಮ ಸೇವಾ ಸಂಸ್ಥೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು.
ಕಾರ್ಯಕ್ರಮದ ನಂತರ ಮೂಲ್ಕಿಯ ನವ ವೈಭವ ಕಲಾವಿದರಿಂದ 'ಸತ್ಯದ ತುಡರ್' ಭಕ್ತಿ ಪ್ರಧಾನ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಡಾ. ಜಗನ್ನಾಥ ಶೆಟ್ಟಿ ನಿಡೋಡಿ ಚಾವಡಿಮನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.