ಧರ್ಮ ಬದುಕನ್ನು ಬೆಳಗುವ ಮಾರ್ಗ: ಗಾಳಿಮನೆ ವಿನಾಯಕ ಭಟ್
ಅವರು ಶ್ರೀ ಕ್ಷೇತ್ರ ಬನ್ನಡ್ಕದಲ್ಲಿ 46ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಅಂಗವಾಗಿ ಜರಗಿದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಇಂದು ಸಮಾಜ ಧರ್ಮದ ನಿಜಾರ್ಥವನ್ನು ಅರಿಯದೇ ಧರ್ಮಾಂಧತೆ, ಮತಾಂಧತೆಯಂತಹ ಆತಂಕರಾರಿ ಬೆಳವಣಿಗೆಗಳಿಗೆ ಕಾರಣವಾಗುತ್ತಿರುವುದು ವಿಷಾದನೀಯ ಎಂದವರು ಅಭಿಪ್ರಾಯಪಟ್ಟರು.
ಸಮ್ಮಾನ, ಪ್ರತಿಭಾ ಪುರಸ್ಕಾರ:
ಈ ಸಂದರ್ಭದಲ್ಲಿ ಸಮಾರಂಭದ ಅಧ್ಯಕ್ಷತೆ ವಹಿಸಿದ ಬನ್ನಡ್ಕ ಶ್ರೀ ಶಾರಾದಾ ಮಹೋತ್ಸವ ಸಮಿತಿ ಅಧ್ಯಕ್ಷ ಎಂ. ದಯಾನಂದ ಪೈ, ಸತ್ಯನಾರಾಯಣ ಪೂಜಾ ಸಮಿತಿ ಗೌರವಾಧ್ಯಕ್ಷ ಉದ್ಯಮಿ ಅರುಣ್ ಪ್ರಕಾಶ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಬನ್ನಡ್ಕದ ರಾಮಚಂದ್ರ ದೇವಾಡಿಗ, ಪಂಚಾಯತ್ ನ ನೀರು ಸರಬರಾಜು ವ್ಯವಸ್ಥೆ ನೋಡಿಕೊಳ್ಳುವ ದಿನೇಶ್ ಪೂಜಾರಿ, ಉದಯ ಪೂಜಾರಿ ಅವರನ್ನು ಸಮ್ಮಾನಿಸಲಾಯಿತು. ಸ್ಥಳೀಯ ಶಾಲಾ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ದಿ. ಶ್ರೀಧರ್ ಬನ್ನಡ್ಕ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ನಡೆಯಿತು. ಪೋಲೀಸ್ ಸಿಬಂದಿಯಾಗಿರುವ ಸ್ಥಳೀಯ ರಾಜೇಶ್ ರಾವ್, ಪಂಚಾಯತ್ ಸದಸ್ಯ ನಿತಿನ್ ಕೋಟ್ಯಾನ್ ಅತಿಥಿಗಳಾಗಿದ್ದರು.
ಕೇಶವ ಬನ್ನಡ್ಕ, ಸತೀಶ್ ರಾವ್ ಬನ್ನಡ್ಕ, ಸದಾಶಿವ ಬನ್ನಡ್ಕ, ಮೋಹನ ದಾಸ್ ಬನ್ನಡ್ಕ ಸಹಕರಿಸಿದರು.
ಪೂಜಾ ಸಮಿತಿ ಅಧ್ಯಕ್ಷ ಸೂರಜ್ ಎಂ. ಬನ್ನಡ್ಕ ಸ್ವಾಗತಿಸಿದರು. ಧರಣೇಂದ್ರ ಜೈನ್ ಸಮ್ಮಾನ ಪತ್ರ ವಾಚಿಸಿದರು. ಕೋಶಾಧಿಕಾರಿ ಉಮೇಶ್ ಬಿ. ಸಾಲ್ಯಾನ್ ಕಳೆದ ಸಾಲಿನ ಲೆಕ್ಕ ಪತ್ರ ಮಂಡಿಸಿದರು. ಕಾರ್ಯದರ್ಶಿ ಸಂತೋಷ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬಳಿಕ ಬನ್ನಡ್ಕ ಶ್ರೀ ನಾಗಬ್ರಹ್ಮ ಭಜನಾ ಮಂಡಳಿಯವರ ಸಂಕೀರ್ತನೆ, ಡೆನ್ನನ ಕಲಾವಿದರು ಕಾರ್ಕಳ ಅವರಿಂದ ತುಳು ನಾಟಕ ಪ್ರದರ್ಶನ ಜರಗಿತು.