ಉಡುಪಿಯ ಶೀರೂರು ಶ್ರೀ ಪರ್ಯಾಯೋತ್ಸವಕ್ಕೆ ಧರ್ಮಸ್ಥಳ ಕ್ಷೇತ್ರದಿಂದ ವಿಶೇಷ ಹೊರೆಕಾಣಿಕೆ
Wednesday, January 14, 2026
ಉಜಿರೆ: ಉಡುಪಿಯ ಶ್ರೀ ಶೀರೂರು ಪರ್ಯಾಯೋತ್ಸವಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ವಿಶೇಷ ಹೊರೆಕಾಣಿಕೆ ಶೀರೂರು ಪರ್ಯಾಯೋತ್ಸವ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಒಂದು ಕೋಟಿ ರೂ. ಮೊತ್ತದ ವಿಶೇಷ ಕೊಡುಗೆಯೊಂದಿಗೆ 120 ಗಾಡಿಗಳಲ್ಲಿ 200 ಕ್ವಿಂಟಲ್ ಅಕ್ಕಿ, 15 ಕ್ವಿಂಟಾಲ್ ತರಕಾರಿ, ಬೇಳೆ, ಬೆಲ್ಲ, ಸಕ್ಕರೆ ಸಹಿತ ಬೃಹತ್ ಹಸಿರು ಹೊರೆಕಾಣಿಕೆಯನ್ನು ಪ್ರಥಮ ದಿನ ಮೆರವಣಿಗೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಶ್ರೀ ಕೃಷ್ಣನ ಸನ್ನಿಧಾನಕ್ಕೆ ಸಲ್ಲಿಸಲಾಯಿತು.
ಪರ್ಯಾಯ ಶೀರೂರು ಶ್ರೀ ವೇದವರ್ದನ ತೀರ್ಥ ಶ್ರೀಪಾದಂಗಳವರು ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಧರ್ಮಸ್ಥಳ ಅನ್ನಪೂರ್ಣ ಛತ್ರದ ಪ್ರಬಂಧಕ ಸುಬ್ರಹ್ಮಣ್ಯ ಪ್ರಸಾದ್, ಶ್ರೀ ಪುತ್ತಿಗೆ ಮಠದ ದಿವಾನರಾದ ಡಾ. ಉದಯ ಕುಮಾರ ಸರಳತ್ತಾಯ, ಹೊರೆಕಾಣಿಕೆ ಸಮಿತಿ ಸಂಚಾಲಕ ಸುಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಮೋಹನ್ ಭಟ್, ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ನಾಗರಾಜ್ ಶೆಟ್ಟಿ, ಯೋಜನಾಧಿಕಾರಿ ಸುರೇಂದ್ರ ನಾಯ್ಕ್, ದಿಲೀಪ್ ಜೈನ್, ಆನಂದ ಸುವರ್ಣ, ಪ್ರಚಾರ ಸಮಿತಿಯ ನಂದನ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.