ರಾಷ್ಟ್ರ ಮಟ್ಟದ ಖೇಲೋ ಇಂಡಿಯಾ ಕರಾಟೆಯಲ್ಲಿ ಮಹಮ್ಮದ್ ರಯ್ಯಾನ್ ಪ್ರಥಮ
Wednesday, January 14, 2026
ಉಜಿರೆ: ಹಾಸನದ ಎಂಸಿಇ ಕಾಲೇಜಿನಲ್ಲಿ ಜ.11 ರಂದು ಹಾಸನ ಜಿಲ್ಲಾ ಕರಾಟೆ ಅಸೋಸಿಯೇಷನ್ ಮತ್ತು ಮೌಲೆ ಶೂಟೋಕಾನ್ ಕರಾಟೆ ಡೊ ಅಸೋಸಿಯೇಷನ್ ಇಂಡಿಯಾ ಸಹಯೋಗದೊಂದಿಗೆ ನಡೆದ ಹಾಸನ್ ಓಪನ್ 5ನೇ ರಾಷ್ಟ್ರ ಮಟ್ಟದ ಖೇಲೋ ಇಂಡಿಯಾ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಕರಾಟೆಯ ಕಟಾ ಮತ್ತು ಫೈಟಿಂಗ್ ವಿಭಾಗದಲ್ಲಿ ಉಜಿರೆಯ ಮಹಮ್ಮದ್ ರಯ್ಯಾನ್ ಪ್ರಥಮಸ್ಥಾನ ಪಡೆದು ಚಿನ್ನದ ಪದಕ ಹಾಗು ಟ್ರೋಫಿ ಪಡೆದಿದ್ದಾರೆ.
ಅವರು ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿಯಾಗಿದ್ದು, ಉಜಿರೆಯ ಆರ್‌ಆರ್ ಸೆಕ್ಯುರಿಟಿ ಸಿಸಿ ಟಿವಿ ಉದ್ಯಮಿ ಬಿ.ಎಚ್. ಇಬ್ರಾಹಿಂ ಮತ್ತು ನೂರ್ ಜಹಾನ್ ದಂಪತಿ ಪುತ್ರ. ಅವರಿಗೆ ಶಿಹಾನ್ ಅಬ್ದುಲ್ ರಹಿಮಾನ್ ತರಬೇತಿ ನೀಡಿದ್ದರು.