ಸಂಘಟನೆಯಿಂದ ಪ್ರಗತಿ: ಕರಿಂಜೆ ಸ್ವಾಮೀಜಿ
ಕರಿಂಜೆ ಶ್ರೀ ಲಕ್ಷ್ಮೀ ಸತ್ಯನಾರಾಯಣ ವೀರಾಂಜನೇಯ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿಯವರು ಆಶೀರ್ವಚನಗೈದರು. ಸಮಾಜದ ಜನರು ಸಂಘಟಿತರಾದಾಗ ಸರ್ವರ ಪ್ರಗತಿಯಾಗುತ್ತದೆ. ಆದ್ದರಿಂದ ಸಮಾಜದ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಕರೆಯಿತ್ತರು.
ಮುಖ್ಯ ಅತಿಥಿ ಕಾರ್ಕಳ ಪೊಲೀಸ್ ಠಾಣಾ ಉಪನಿರೀಕ್ಷಕ ಪ್ರಸನ್ನ ಕುಮಾರ್ ಮಾತನಾಡಿ ಮಕ್ಕಳಿಗೆ ಉತ್ತಮ ಉನ್ನತ ಶಿಕ್ಷಣ ನೀಡಿ ಸರಕಾರಿ ಅಧಿಕಾರಿ ವರ್ಗದ ಕೆಲಸದಲ್ಲಿ ತೊಡಗಿಕೊಳ್ಳಲು ಪ್ರೇರೇಪಿಸುವಂತೆ ಸಲಹೆಯಿತ್ತರು.
ಉದ್ಯಮಿ ಡಾ. ಸರಳ ರಮೇಶ್ ಮಾತನಾಡಿ, ಯುವ ಜನತೆ ಸಮಾಜದ ಬಗ್ಗೆ ಕಳಕಳಿ ತೋರುವಂತೆ ಸಲಹೆಯಿತ್ತರು.
ಮೆಸ್ಕಂ ಸಹಾಯಕ ಇಂಜೀನಿಯರ್ ದೇವಿ ಪ್ರಸಾದ್ ಮಾತನಾಡಿ ಶಿಕ್ಷಣ ಸಮಾಜಕ್ಕೆ ಬೆಳಕು ನೀಡುವುದು ಎಂದರು.
ಗೌರವ ಅಧ್ಯಕ್ಷರಾದ ಸದಾನಂದ ನಾರಾವಿ, ಜಿಲ್ಲಾ ಸಂಘದ ಪದಾಧಿಕಾರಿ ರಾಮ ಮಂಕುಡೆ ವೇದಿಕೆಯಲ್ಲಿದ್ದರು.
ಸನ್ಮಾನ: ಸಮಾಜದ ವ್ಯಕ್ತಿಗಳಾಗಿ ಸಮಾಜಮುಖಿ ಕಾರ್ಯ ನಡೆಸಿ ಗಮನ ಸೆಳೆದಿರುವ ವೀರಪ್ಪ ಮಡಿವಾಳ ಪೆರಿಂಜೆ, ಜಯ ಕುಂದರ್ ಬೊಗ್ರುಗುಡ್ಡೆ, ಜಯ ಮಡಿವಾಳ, ಸೂರನ್ನ ಕನ್ನರಬೆಟ್ಟು, ಜಯ ಬೆಳುವಾಯಿ, ಸದಾನಂದ ಮಿಜಾರು, ಚಿನ್ನಯ ಮಡಿವಾಳ, ವಾಸು ಕಡಂದಲೆ, ಶ್ಯಾಮ ಮಡಿವಾಳ, ಶ್ರೀಮತಿ ಸುಜಾತರನ್ನು ಹಾಗೂ ಅತಿಥಿ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಎಸೆಸೆಲ್ಸಿ ಹಾಗೂ ಪಿಯುಸಿ ಪ್ರತಿಭಾನ್ವಿ ತರಿಗೆ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಸಭಾ ಕಾರ್ಯಕ್ರಮದ ಮುಂಚಿತವಾಗಿ ಸಮಾಜಭಾಂದವರ ಸತ್ಯನಾರಾಯಣ ಪೂಜೆ ಸಂಪನ್ನಗೊಂಡಿತು.
ಸದಾನಂದ ನಾರಾವಿ ಸ್ವಾಗತಿಸಿದರು. ತೇಜಸ್ವಿನಿ ಪ್ರಾರ್ಥನೆಗೈದರು. ಶ್ರೇಯಸ್ ವರದಿ ಮಂಡಿಸಿದರು. ಶಿವಾನಂದ ಲೆಕ್ಕಪತ್ರ ಮಂಡಿಸಿದರು. ಸುಜಾತಾ ಮಾರೂರು ವಂದಿಸಿದರು. ಶಾರದಾ ಶಂಕರ್ ನಿರೂಪಿಸಿದರು.