ಜ.10 ರಿಂದ 12 ರವರೆಗೆ ಪುತ್ತೂರಿನಲ್ಲಿ ಕೃಷಿಮೇಳ-ಸಸ್ಯಜಾತ್ರೆ’

ಜ.10 ರಿಂದ 12 ರವರೆಗೆ ಪುತ್ತೂರಿನಲ್ಲಿ ಕೃಷಿಮೇಳ-ಸಸ್ಯಜಾತ್ರೆ’


ಪುತ್ತೂರು: ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಬೆಂಗಳೂರು ಹಾಗೂ ದ.ಕ. ಜಿಲ್ಲಾ ಕೃಷಿಕ ಸಮಾಜದ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜ. 10ರಿಂದ 12 ರ ತನಕ ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಗದ್ದೆಯಲ್ಲಿ ನಡೆಯಲಿರುವ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ ಹಾಗೂ ಸಸ್ಯ ಜಾತ್ರೆಯ ಆಮಂತ್ರಣ ಬಿಡುಗಡೆ ಮತ್ತು ಪೂರ್ವಭಾವಿ ಸಭೆ ದೇವಸ್ಥಾನದ ಆವರಣದಲ್ಲಿ ನಡೆಯಿತು.

ದ.ಕ.ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ ಅಧ್ಯಕ್ಷತೆ ವಹಿಸಿದ್ದರು. ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಅವರು ಕಾರ್ಯಕ್ರಮದ ಸಿದ್ಧತೆ ಹಾಗೂ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಜವಾಬ್ದಾರಿಗಳನ್ನು ಹಂಚಲಾಯಿತು.

ಕೃಷಿ ಇಲಾಖೆಯ ಪುತ್ತೂರು ಉಪವಿಭಾಗದ ಉಪಕೃಷಿ ನಿರ್ದೇಶಕ ಶಿವಶಂಕರ ದಾನೇಗೊಂಡರ ಅವರು ಮಾತನಾಡಿ, ವಿಜ್ಞಾನಿಗಳು ಹಾಗೂ ಯಶಸ್ವಿ ಕೃಷಿಕರಿಂದ ರೈತರಿಗೆ ವಿಚಾರಗೋಷ್ಟಿ ಹಾಗೂ ಕೃಷಿ ಮೇಳದ ಪೂರ್ವಭಾವಿಯಾಗಿ ಸಿರಿಧಾನ್ಯ ಕುರಿತು ಜಾಗೃತಿ ಮೂಡಿಸುವ ವಾಕಥಾನ್ ನಡೆಸುವ ಬಗ್ಗೆ ಮಾಹಿತಿ ನೀಡಿದರು.

ಮಳಿಗೆಗಳ ನಿರ್ವಹಣೆ ಮಾಡಲಿರುವ ರೈತಕುಡ್ಲ ಪ್ರತಿಷ್ಠಾನದ ಭರತ್‌ರಾಜ್ ಸೊರಕೆ ಹಾಗೂ ಸುಹಾಸ್ ಮರಿಕೆ ಅವರು ಮಳಿಗೆಗಳ ವಿಂಗಡನೆಗಳ ಕುರಿತು ಮಾಹಿತಿ ನೀಡಿ 150ಕ್ಕೂ ಅಧಿಕ ಮಳಿಗೆಗಳು ಕೃಷಿ ಮೇಳದಲ್ಲಿ ಇರಲಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಸಮಾಜದ ಕಾರ್ಯಾಧ್ಯಕ್ಷ ಪದ್ಮನಾಭ ರೈ ಕಲ್ಲಡ್ಕ, ಪ್ರಮುಖರಾದ ಸುಭಾಶ್ ರೈ ಬೆಳ್ಳಿಪ್ಪಾಡಿ, ಪಿ.ಕೆ.ರಾಜು ಪೂಜಾರಿ ಬೆಳ್ತಂಗಡಿ, ಮಹಾವೀರ ಜೈನ್ ಬೆಳ್ತಂಗಡಿ, ಸವಣೂರು ಸಿಎ ಬ್ಯಾಂಕ್ ಅಧ್ಯಕ್ಷ ತಾರಾನಾಥ ಕಾಯರ್ಗ, ಜಿಲ್ಲಾ ಕೃಷಿಕ ಸಮಾಜದ ಕೋಶಾಧಿಕಾರಿ ಕುಸುಮಾಧರ ಎ.ಟಿ., ಉಪಾಧ್ಯಕ್ಷ ಚಂದ್ರ ಕೋಲ್ಚಾರು, ಶರತ್ ಅಡ್ಕಾರು, ಬಾಳಪ್ಪ ಪೂಜಾರಿ ಬಂಬಿಲದೋಳ, ಇ.ಎಸ್.ವಾಸುದೇವ ಇಡ್ಯಾಡಿ, ರಾಜರಾಮ ಪ್ರಭು, ಸುರೇಶ್ ರೈ ಸೂಡಿಮುಳ್ಳು, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೃಷಿ ಅಧಿಕಾರಿ ಬಾಲಕೃಷ್ಣ ಎಂ., ಸುಕುಮಾರ ಕೆ.ಆರ್.ಶಿರಾಡಿ, ಗೋವಿಂದ ಬೋರ್ಕರ್ ಪುತ್ತೂರು, ಪಾಂಡುರಂಗ ಹೆಗ್ಡೆ, ಎ.ಪಿ.ಸದಾಶಿವ ಮರಿಕೆ, ಪ್ರವೀಣ್ ಚೆನ್ನಾವರ, ಬಾಲಕೃಷ್ಣ ಗೌಡ ಕಬಕ, ಸಂಜೀವ ಶೆಟ್ಟಿ, ವಿನೋದ್ ಕುಮಾರ್ ರೈ ಮುಂಡಾಳ, ಸುದರ್ಶನ ಶಿರಾಡಿ, ವಿನೋದ್ ಶೆಟ್ಟಿ, ರಾಮಪ್ರಸಾದ್ ಬಿ.ಎಸ್., ಧನಂಜಯ ಬೆದ್ರೋಡಿ, ದಿವ್ಯಪ್ರಸಾದ್, ಸಹಾಯಕ ಕೃಷಿ ನಿರ್ದೇಶಕ ಚೆಲುವರಂಗಪ್ಪ ಟಿ.ಜಿ., ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಜಿ.ಗೌಡ ಮೊದಲಾದವರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article