ಭಜನೆ, ಸ್ತುತಿ ಆತ್ಮ ಮತ್ತು ಪರಮಾತ್ಮನ ನಡುವಿನ ಸೇತುವೆ: ಸ್ವಸ್ತಿಶ್ರೀ ಶ್ರೀಮದಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ
ಭಾರತೀಯ ಜೈನ್ ಮಿಲನ್ ವಲಯ-೮ ಆಶ್ರಯದಲ್ಲಿ ಮಂಗಳೂರು ಜೈನ್ ಮಿಲನ್ ಆತಿಥ್ಯದಲ್ಲಿ ಪಿಲಿಕುಳ ನಿಸರ್ಗಧಾಮದ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಭವನದಲ್ಲಿ ರವಿವಾರ ನಡೆದ ರಾಜ್ಯ ಮಟ್ಟದ ಜಿನ ಭಜನೆ ಸ್ಪರ್ಧೆ ಸೀಸನ್ ೯ರ ಫೈನಲ್ ಜಿನ ಭಜನೆ ಸ್ಪರ್ಧೆ ಉದ್ಘಾಟನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಜೈನರು ಗುಣಗಳ ಆರಾಧಕರು. ಭಜನೆಗೆ ಅತೀವ ಶಕ್ತಿ ಇದೆ. ಭಜನೆಯ ಭಕ್ತಿ ಭಗವಂತನಿಗೆ ಮಾತ್ರ ಸೀಮಿತವಲ್ಲ. ದಿನನಿತ್ಯದ ಕೆಲಸಕ್ಕೂ ಅಗತ್ಯ. ಭಜನೆ ಮುಕ್ತಿಯ ಮಾರ್ಗವಾಗಿದೆ. ಕಟುಕನನ್ನು ಕೂಡ ಕರಗಿಸುವ ಶಕ್ತಿ ಭಜನೆಗಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾ ಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಜೈನರು ಹಿಡಿದ ಕೆಲಸವನ್ನು ಮುನ್ನಡೆಸುತ್ತಾರೆ ಎಂದು ಜಿನ ಭಜನೆ ಕಾರ್ಯಕ್ರಮ ಸಾಬೀತುಪಡಿಸಿದೆ. ಮಾರ್ನಾಡು ವರ್ಧಮಾನ ಹೆಗ್ಗಡೆ ಅವರ ವ್ಯಕ್ತಿತ್ವ ಅಪರೂಪವಾದದ್ದು. ಭಜನೆಯನ್ನು ಮನೆ ಮನೆಗೆ ತಲುಪಿಸಿ ಆ ಕ್ಷೇತ್ರಕ್ಕೆಅವರ ಕೊಡುಗೆ ಅಪಾರ. ಭಜನೆಗೆ ಸಮಾಜದ ಜನರಿಂದ ಇನ್ನಷ್ಟು ಪ್ರೋ ತ್ಸಾಹ ಸಿಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಕಾರ್ಕಳ ಶ್ರೀ ಜೈನ ಧರ್ಮ ಜೀಣೋದ್ಧಾರಕ ಸಂಘದ ಕಾರ್ಯಾಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ಮಾತನಾಡಿ, ಎಳವೆಯಲ್ಲೂ ಜಿನ ಭಜನೆ ಹಾಡುವ ಮೂಲಕ ಅವರಲ್ಲಿ ಧಾರ್ಮಿಕ ಭಾವನೆ ಹೆಚ್ಚಾಗುತ್ತದೆ ಎಂದರು.
"ಸಿದ್ಧವನದ ಸಂತ’ ಎಂಬ ಪುಸ್ತಕ ಲೋಕಾರ್ಪಣೆಗೊಳಿಸಲಾಯಿತು. ಶೃತಕೀರ್ತಿರಾಜ್ ಪ್ರಸ್ತಾವಿಸಿದರು.
ಡಾ. ಹೇಮಾವತಿ ವೀ ಹೆಗ್ಗಡೆ, ಭಾರತೀಯ ಜೈನ್ ಮಿಲನ್ ರಾಷ್ಟ್ರೀಯಕಾರ್ಯಾಧ್ಯಕ್ಷ ಧರ್ಮಸ್ಥಳ ಸುರೇಂದ್ರ ಕುಮಾರ್, ರಾಷ್ಟ್ರೀಯ ಉಪಾಧ್ಯಕ್ಷೆ ಅನಿತಾ ಸುರೇಂದ್ರ ಕುಮಾರ್, ಧಾರವಾಡ ವೈದ್ಯಕೀಯ ವಿ.ವಿ. ಉಪಕುಲಪತಿ ಡಾ. ನಿರಂಜನ್ ಕುಮಾರ್ ಮತ್ತು ಪದ್ಮಲತಾ, ಹಿರಿಯ ನ್ಯಾಯ ವಾದಿ ಪಿ.ಪಿ. ಹೆಗ್ಡೆ, ಉದ್ಯಮಿ ದಿಲೀಪ್ ಜೈನ್ ಮೊದಲಾದವರು ಇದ್ದರು.
ಗಣ್ಯರನ್ನು ಸಮ್ಮಾನಿಸ ಲಾಯಿತು. ಭಾರತೀಯ ಜೈನ್ ಮಿಲನ್ ಮಂಗ ಳೂರು ಅಧ್ಯಕ್ಷ ರತ್ನಾಕರ ಜೈನ್ ಸ್ವಾಗತಿಸಿ, ಪ್ರೊ. ವೃಷಭರಾಜ್ ವಂದಿಸಿದರು. ನವಿತಾ ಜೈನ್ ನಿರೂಪಿಸಿದರು.