ಕುಂಬಾರ ಸಮಾಜಕ್ಕೆ ವಿಶೇಷ ಅನುದಾನ ನೀಡುವ ನಿಟ್ಟಿನಲ್ಲಿ ಪ್ರಯತ್ನ: ಸತೀಶ್ ಜಾರಕಿಹೊಳಿ

ಕುಂಬಾರ ಸಮಾಜಕ್ಕೆ ವಿಶೇಷ ಅನುದಾನ ನೀಡುವ ನಿಟ್ಟಿನಲ್ಲಿ ಪ್ರಯತ್ನ: ಸತೀಶ್ ಜಾರಕಿಹೊಳಿ


ಮಂಗಳೂರು: ಕುಂಬಾರಿಕೆ ವೃತ್ತಿ ನಡೆಸಿಕೊಂಡು ಬಂದಿರುವ ಸಮಾಜಕ್ಕೆ ಇಂದಿನ ಆಧುನಿಕ ವ್ಯವಸ್ಥೆಯ ಕಾರಣದಿಂದ ಸಮಸ್ಯೆ ಎದುರಾಗಿದೆ. ಸಮಾಜಕ್ಕೆ ಪ್ರಾತಿನಿಧ್ಯ ಅಧಿಕವಾಗಿ ದೊರೆಯಬೇಕಾದ ಅಗತ್ಯ ಇದೆ. ಹೀಗಾಗಿ ಮುಂಬರುವ ರಾಜ್ಯ ಬಜೆಟ್‌ನಲ್ಲಿ ಕುಂಬಾರ ಸಮಾಜಕ್ಕೆ ವಿಶೇಷ ಅನುದಾನ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಹಾಗೂ ದಾಸ್ ಚಾರಿಟೆಬಲ್ ಸೇವಾ ಟ್ರಸ್ಟ್ ಮಂಗಳೂರು ಸಹಯೋಗದಲ್ಲಿ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ರವಿವಾರ ಜರಗಿದ ಕುಂಭ ಕಲಾವಳಿ-ಕುಲಾಲ ಕಲಾ ಸೇವಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾಣಿಲ ಶ್ರೀ ಧಾಮ ಶ್ರೀ ಮಹಾಲಕ್ಷ್ಮಿ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ಚನ ನೀಡಿ, ಧರ್ಮ, ಕರ್ತವ್ಯ ಪ್ರಜ್ಞೆ, ಸಂಸ್ಕಾರ, ಆಚಾರಗಳನ್ನೊಳಗೊಂಡ ಮೌಲ್ಯಯುತ ಬದುಕಿನಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ಕುಲಾಲರ ಅಪೂರ್ವ ಕಲೆ, ಕೌಶಲ ಜಗತ್ತಿಗೆ ಪರಿಚಯವಾಗಬೇಕು. ಮುಂದಿನ ಜನಾಂಗಕ್ಕೆ ವರ್ಗಾವಣೆಯಾಗಬೇಕು ಎಂದರು. 

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಈ ಹಿಂದೆ ಸ್ಥಾಪಿಸಲಾಗಿದ್ದ ಕುಂಭ ನಿಗಮವನ್ನು ಈಗ ನಿರ್ಲಕ್ಷಿಸಲಾಗಿದ್ದು ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನೆ ಎತ್ತುತ್ತೇನೆ ಎಂದು ತಿಳಿಸಿದರು. 

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಅಖೀಲ ಭಾರತ ಕುಂಬಾರರ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಿವ ಕುಮಾರ್ಚೌಡ ಶೆಟ್ಟಿ, ಅಖೀಲ ಭಾರತ ಕುಂಬಾರರ ಮಹಾಸಭಾದ ರಾಜ್ಯಾಧ್ಯಕ್ಷ ನಿತ್ಯಾಭರಣ ಚೌಡ ಶೆಟ್ಟಿ ಮುಂಬಯಿ ಕುಲಾಲ ಸಂಘದ ಅಧ್ಯಕ್ಷ ರಘು ಎ.ಮೂಲ್ಯ, ಬೆಂಗಳೂರು ಕುಲಾಲ ಸಂಘದ ಅಧ್ಯಕ್ಷ ದಿವಾಕರ್ಮೂಲ್ಯ, ಬೆಂಗಳೂರು ಶಿಲ್ಪಾ ಪ್ರೊಡಕ್ಟ್ ಮಾಲಕ ರಮೇಶ್ ಬಾಳೆಹಿತ್ಲು, ಬೆಂಗಳೂರು ಸೌಂದರ್ಯ ವಿದ್ಯಾಸಂಸ್ಥೆಯ ಚೇರ್ಮನ್ ಸೌಂದರ್ಯ ಮಂಜಪ್ಪ, ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ ನ ಅಧ್ಯಕ್ಷ ಬಿ. ಪ್ರೇಮಾನಂದ ಕುಲಾಲ್, ದಾಸ್ ಚಾರಿಟೆಬಲ್ ಸೇವಾ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಆಶಾಲತಾ ದಾಸ್, ರಾಜ್ಯ ಕುಲಾಲ ಕುಂಬಾರ ಯುವವೇದಿಕೆಯ ಸ್ಥಾಪಕಾಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್, ರಾಜ್ಯಾಧ್ಯಕ್ಷ ಸುಧಾಕರ್ಸಾಲ್ಯಾನ್, ಜಿಲ್ಲಾಧ್ಯಕ್ಷ ಅನಿಲ್ ದಾಸ್, ಪ್ರಮುಖರಾದ ನವೀನ್ ಕುಮಾರ್ ಮಜಲ್, ರವಿ ಕುಲಾಲ್, ರಾಧಾಕೃಷ್ಣ ಬಂಟ್ವಾಳ , ಭಾರತಿ ಸೇಸಪ್ಪ ಬಂಟ್ವಾಳ, ಸುಲೋಚನಿ ಟೀಚರ್ಕೊಲ್ಯ ಉಪಸ್ಥಿತರಿದ್ದರು. 

ಪದಗ್ರಹಣ ಸಮಾರಂಭದಲ್ಲಿ ಮುಳಿಯ ಶ್ರೀ ವೈಷ್ಣವಿ ಕ್ಷೇತ್ರದ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ, ನಡುಬೊಟ್ಟು ಕ್ಷೇತ್ರದ ಧರ್ಮದರ್ಶಿ ಡಾ. ರವಿ ಎನ್., ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಉಪಸ್ಥಿತರಿದ್ದರು. ವಿಭಾಗೀಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ ಸ್ವಾಗತಿಸಿ, ಜಯಂತ್ ಸಂಕೊಳಿಗೆ  ವಂದಿಸಿದರು. ಎಚ್.ಕೆ. ನಯನಾಡು, ಹೇಮಚಂದ್ರ ಕೈರಂಗಳ ನಿರ್ವಹಿಸಿದರು. 

"ಕುಲಾಲ ಸಿಂಧೂರ’ ಪುರಸ್ಕಾರ:

ವಿವಿಧ ಕ್ಷೇತ್ರದ ಸಾಧನೆಗೈದ ಬಿ.ಎಸ್. ಕುಲಾಲ್ ಪುತ್ತೂರು, ಸೀತಾರಾಮ ಬಂಗೇರ ಕೊಲ್ಯ, ಚಂದಪ್ಪ ಮೂಲ್ಯ ಉಪ್ಪಿನಂಗಡಿ, ಸುನಿಲ್ ಆರ್. ಸಾಲ್ಯಾನ್, ಪುರುಷೋತ್ತಮ ಕಲಾವಿ, ಡಾ. ಎಂ. ಅಣ್ಣಯ್ಯ ಕುಲಾಲ್, ಚಿದಂಬರ ಬೈಕಂಪಾಡಿ, ಸಾವಿತ್ರಿ ಮಹಾಬಲ ಹಾಂಡ, ಗಿರೀಶ್ ಕೆ.ಎಚ್. ವೇಣೂರು, ವಿಠಲ್ ಕುಲಾಲ್ ಅವರಿಗೆ "ಕುಲಾಲ ಸಿಂಧೂರ" ಪುರಸ್ಕಾರ ನೀಡಿ ಗೌರವಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article