ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಕೊಳ್ಳಿ ಮುಹೂರ್ತ
ಈ ನಿಮಿತ್ತ ಮಕರ ಸಂಕ್ರಮಣದ ದಿನವಾದ ಬುಧವಾರ ದೈವಸ್ಥಾನದಲ್ಲಿ ಕೊಳ್ಳಿ ಮುಹೂರ್ತ ನೆರವೇರಿತು. ಆರಂಭದಲ್ಲಿ ದೈವಸ್ಥಾನದಲ್ಲಿ ತಂಬಿಲ ನಡೆಯಿತು. ನಂತರ ಪೂಜೆ ನೆರವೇರಿತು. ಬಳಿಕ ವಿವಿಧ ವೈದಿಕ ವಿದಿ ವಿಧಾನಗಳನ್ನು ನೆರವೇರಿಸಿಕೊಳ್ಳಿ ಕಡಿಯಲಾಯಿತು. ನಂತರ ದೈವಸ್ಥಾನದ ಮುಖ್ಯ ಪೂಜಾರಿ ರಾಮಚಂದ್ರ ಮಣಿಯಾಣಿ ಸರ್ವರಿಗೂ ಪ್ರಸಾದ ವಿತರಿಸಿದರು.
ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಕುಮಾರ್ ರುದ್ರಪಾದ, ಕುಕ್ಕೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾಗೂ ದೈವಸ್ಥಾನದ ಅಡಳಿತ ಸಮಿತಿ ಕಾರ್ಯಾಧ್ಯಕ್ಷ ಹರೀಶ್.ಎಸ್.ಇಂಜಾಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಆಡಳಿತ ಸಮಿತಿ ಗೌರವಾಧ್ಯಕ್ಷ ಎಂ.ಚಂದ್ರಹಾಸ ಭಟ್, ಕಾರ್ಯದರ್ಶಿ ರಾಜೇಶ್ ಎನ್.ಎಸ್, ಕೋಶಾಧಿಕಾರಿ ರತ್ನಾಕರ ಸುಬ್ರಹ್ಮಣ್ಯ, ಆಡಳಿತ ಮಂಡಳಿ ಸದಸ್ಯರಾದ ಗೋಪಾಲ್ ಮಲೆ, ರಾಜೇಶ್ ಕಾಶಿಕಟ್ಟೆ, ಸುರೇಶ್ ಉಜಿರಡ್ಕ, ಮಹಾಬಲ ರೈ, ನವೀನ್ ಮಣಿ, ಕೃಷ್ಣ ಮಣಿಯಾಣಿ, ಜಯಪ್ರಕಾಶ್ ಜಾಡಿಮನೆ, ಪ್ರಮುಖರಾದಸುಬ್ಬಪ್ಪ ಶೃಂಗೇರಿ ಕಾಲನಿ, ಶಿವರಾಮ ಪಳ್ಳಿಗದ್ದೆ, ಶಿಶುಪಾಲ ಜಾಡಿಮನೆ, ಗಂಗಾ ಎಸ್.ಎನ್., ವಿನಯ್, ಅಭಿಲಾಷ್, ಜಯನ್ ಡಿಪೋ, ದಿನೇಶ್ ಕುದುರೆಮಜಲು, ಸುಪ್ರಿತ್, ಸುಮಿತ್, ಕಾರ್ತಿಕ್, ಸುಬ್ರಹ್ಮಣ್ಯ ಮಣಿಯಾಣಿ, ಮೀನಾಕ್ಷಿ ಕುಲ್ಕುಂದ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.