ಅಖಿಲ ಭಾರತ ಅಂತರ್ ವಿವಿ ನೆಟ್‌ಬಾಲ್: ಮೂಡುಬಿದಿರೆಯ ಮೂವರು ವಿದ್ಯಾರ್ಥಿನಿಯರು ಆಯ್ಕೆ

ಅಖಿಲ ಭಾರತ ಅಂತರ್ ವಿವಿ ನೆಟ್‌ಬಾಲ್: ಮೂಡುಬಿದಿರೆಯ ಮೂವರು ವಿದ್ಯಾರ್ಥಿನಿಯರು ಆಯ್ಕೆ


ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ ಕೃಷ್ಣ ವಿಶ್ವವಿದ್ಯಾಲಯದಲ್ಲಿ ಫೆಬ್ರವರಿ 14ರಿಂದ 18ರವರೆಗೆ ನಡೆಯಲಿರುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಟ್ಟದ ನೆಟ್‌ಬಾಲ್ ಪಂದ್ಯಾವಳಿಗೆ ಮೂಡುಬಿದಿರೆಯ ಮೂರು ಕಾಲೇಜುಗಳ ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ. 

ಆಳ್ವಾಸ್ ಡಿಗ್ರಿ ಕಾಲೇಜಿನ ಪ್ರಥಮ ಬಿ.ಕಾಂ ವಿದ್ಯಾರ್ಥಿನಿ, ಮಾರ್ನಾಡಿನ ಎಸ್. ದಿವಾಕರ ಕಾಮತ್-ಶಕುಂತಲಾ ದಂಪತಿಯ ಪುತ್ರಿ ನಿರ್ಮಲಾ ಕಾಮತ್, ಶ್ರೀ ಧವಲಾ ಕಾಲೇಜಿನ ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿನಿ, ಮಾರ್ನಾಡಿನ ವಿಜಯ್ ಶೆಟ್ಟಿ-ಮೀರಾ ಶೆಟ್ಟಿ ದಂಪತಿಯ ಪುತ್ರಿ ವಿಶ್ಮಿತಾ ವಿ. ಶೆಟ್ಟಿ ಹಾಗೂ ಅಲಂಗಾರಿನ ಆಂಟನಿ ಮೈಕಲ್- ಗ್ರೇಸಿ ಆಂಟನಿ ದಂಪತಿ ಪುತ್ರಿ, ಆಳ್ವಾಸ್ ಕಾಲೇಜಿನ ದ್ವಿತೀಯ ಎಂ.ಕಾಂ ವಿದ್ಯಾರ್ಥಿ ಜೋಸ್ಮಿನ್ ಮರಿಯಾ ಆಯ್ಕೆಯಾಗಿರುವ ವಿದ್ಯಾರ್ಥಿನಿಯರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article