ಮಹಾಶಿವರಾತ್ರಿ: ವಾಲಗ ವಿಭಾಗದ ಉದ್ಘಾಟನೆ
Saturday, February 14, 2026
ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಾಲಗ ವಿಭಾಗದ ಉದ್ಘಾಟನೆ ಫೆ.14 ರಂದು ಶನಿವಾರ ನೆರವೇರಿತು.
ಶ್ರೀ ಧ.ಮಂ. ಅನುದಾನಿತ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಜಯಶ್ರೀ ಅವರು ವಾಲಗ ವಿಭಾಗವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಜ್ಞಾನೇಶ್ ಕಾರ್ಯಕ್ರಮದ ನಿರೂಪಣೆ ಹಾಗೂ ಸ್ವಾಗತವನ್ನು ನಡೆಸಿಕೊಟ್ಟರು. ಡಿ. ಧರ್ಣಪ್ಪ ಅವರು ವಾಲಗ ವಿಭಾಗದ ಚಟುವಟಿಕೆಗಳನ್ನು ವಿವರಿಸಿ, ವಂದಿಸಿದರು.
ಶ್ರೀ ಕ್ಷೇತ್ರದ ಸಿಬ್ಬಂದಿ ಮಲ್ಲಿಕ್ ಜೈನ್ ಹಾಗೂ ವಾಲಗ ವಿಭಾಗದ ಸ್ವಯಂ ಸೇವಕರು ಉಪಸ್ಥಿತರಿದ್ದರು. ದೇವಸ್ಥಾನದ ಪಾರುಪತ್ಯಗಾರ್‌ರಾದ ಲಕ್ಷ್ಮೀನಾರಾಯಣ ರಾವ್ ಅವರು ಮಾರ್ಗದರ್ಶನ ನೀಡಿ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.