ಪಕ್ಷಾಂತರ ತಡೆ ಕಾಯ್ದೆ ಮೌಲ್ಯಮಾಪನ-ಒಡಿಶಾದಲ್ಲಿ ಸ್ಪೀಕರ್‌ಗಳ ಮಹತ್ವದ ಸಭೆ: ಸ್ಪೀಕರ್ ಯು.ಟಿ. ಖಾದರ್
Monday, April 20, 2026
ಮಂಗಳೂರು: ಪಕ್ಷಾಂತರ ನಿಷೇಧ ತಿದ್ದುಪಡಿ ಕಾಯ್ದೆಯ ಮೌಲ್ಯಮಾಪನ ಹಾಗೂ ಬಲವರ್ಧನೆಗೆ ಸಂಬಂಧಿಸಿದಂತೆ ಲೋಕಸಭಾ ಸ್ಪೀಕರ್ ಮೂಲಕ ನೇಮಕಗೊಂಡ 5 ರಾಜ್ಯಗಳ ವಿಧಾನಸಭಾ ಅಧ್ಯಕ್ಷರ ಸಮಿತಿ ಸಭೆ ಒಡಿಶಾದ ಭುವನೇಶ್ವರದಲ್ಲಿ ಎ.22, 23ರಂದು ನಡೆಯಲಿದೆ ಎಂದು ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಮುಂಬಯಿಯಲ್ಲಿ ಒಂದು ಸಭೆ ನಡೆದಿತ್ತು. ಇದೀಗ ಎರಡನೇ ಸಭೆ ಒಡಿಶಾದಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಒಡಿಶಾ, ಸಿಕ್ಕಿಂ, ಮಹಾರಾಷ್ಟ್ರ, ನಾಗಾಲ್ಯಾಂಡ್, ಕರ್ನಾಟಕ ಸೇರಿದಂತೆ 5 ರಾಜ್ಯಗಳ ಸ್ಪೀಕರ್‌ಗಳು ಭಾಗವಹಿಸಲಿದ್ದಾರೆ. ಒಂದು ವರ್ಷದ ಒಳಗೆ ಈ ಸಮಿತಿ ಲೋಕಸಭಾ ಅಧ್ಯಕ್ಷರಿಗೆ ವರದಿ ನೀಡಬೇಕಾಗಿದೆ ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ.
ಶಾಸಕ ವಿನಯ ಕುಲಕರ್ಣಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದ್ದರೂ, ಅಧಿಕೃತ ಸೂಚನೆ ಬಂದ ಬಳಿಕ ಅವರ ವಿಧಾನಸಭಾ ಅಧಿಕಾರದ ಬಗ್ಗೆ ತೀರ್ಮಾನಿಸಲಾಗುವುದು ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಸಂವಿಧಾನ ತಿದ್ದುಪಡಿ ಮಸೂದೆ ಬಹುಮತವಿಲ್ಲದೆ ಬಿದ್ದುಹೋದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಯು.ಟಿ. ಖಾದರ್ ಮಾತನಾಡುತ್ತಾ, ಸಂವಿಧಾನಬದ್ಧ ತೀರ್ಮಾನಗಳು ಹಾಗೂ ಚರ್ಚೆಗಳ ಮೂಲಕ ಯಾವುದೇ ಪ್ರದೇಶದ ಜನರು, ಸಮುದಾಯಗಳಿಗೆ ಅನ್ಯಾಯವಾಗಬಾರದು ಎನ್ನುವುದು ಮುಖ್ಯ ಎಂದು ಹೇಳಿದರು.